






ಬೆಳ್ತಂಗಡಿ: ತೆಕ್ಕಾರಿನ ಗ್ರಾಮದ ಪ್ರತಿಭಾವಂತ ಯುವಕ ಮರಮ ಗುತ್ತು ಮನೆಯ ಗುರುಕಿರಣ್ ಅವರು ಭಾರತೀಯ ಸಶಸ್ತ್ರ ಪಡೆಗಳ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.


ಉಮೇಶ್ ಪೂಜಾರಿ ಮತ್ತು ಶ್ರೀಮತಿ ಯವರ ಪುತ್ರನಾದ ಗುರುಕಿರಣ್ ಇವರು 26-03-2006 ರಂದು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಂಜುಕ್ಕು ಎಂಬಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಪೆರಿಯೊಟ್ಟು ಬಾರ್ಯ ಗ್ರಾಮ ಎಂಬಲ್ಲಿ ಪೂರ್ಣಗೊಳಿಸಿದರು. ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಉಪ್ಪಿನಂಗಡಿ ಯಲ್ಲಿ ಪೂರ್ಣಗೊಳಿಸಿದರು. ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಉಪ್ಪಿನಂಗಡಿಯಲ್ಲಿ ಪೂರ್ಣಗೊಳಿಸಿದರು. ಪ್ರಸ್ತುತ ತೆಕ್ಕಾರು ಗ್ರಾಮದ ಮರಮ ಗುತ್ತು ಹೊಸಮನೆ ಎಂಬಲ್ಲಿ ವಾಸವಾಗಿರುತ್ತಾರೆ.
ಚಿಕ್ಕ ವಯಸಿನಿಂದಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯನ್ನು ಪೂರೈಸಲು ತರಬೇತಿಗಾಗಿ ಮೊದಲ ಮೆಟ್ಟಿಲನ್ನು ಮಂಗಳೂರಿನ ತರಬೇತಿ ಶಾಲೆ “ವೀರ ರಾಣಿ ಅಬ್ಬಕ್ಕ ಸೇನಾ ” ತರಬೇತಿ ಶಾಲೆಯಲ್ಲಿ 4 ತಿಂಗಳ ತರಬೇತಿಯಿಂದ ಪ್ರಾರಂಭಿಸಿದರು. ಇವರ ಸತತವಾಗಿ 3 ವರ್ಷದ ಕಠಿಣ ಪರಿಶ್ರಮ. ಶಿಸ್ತು ಹಾಗೂ ದೃಢ ಸಂಕಲ್ಪದ ಮೂಲಕ ಈ ಮಹತ್ತರ ಸಾಧನೆಯನ್ನು ಗಳಿಸಿದ್ದಾರೆ.









