







ಶಿಬಾಜೆ : ಅಪರೂಪದ aHUS (Atypical Hemolytic Uremic Syndrome) ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಶಿಬಾಜೆ ಗ್ರಾಮದ ಪತ್ತಿಮಾರು ನಿವಾಸಿ ರಾಘವೇಂದ್ರ ಅಭ್ಯಂಕರ್ ಪುತ್ರ 14 ವರ್ಷದ ವಿದ್ಯಾರ್ಥಿ ಅಂಕುಶ್ ಅಭ್ಯ೦ಕರ್ ಚಿಕಿತ್ಸೆಗೆ ಸಾರ್ವಜನಿಕರಿಂದ ನೆರವಿನ ಕೋರಿಕೆ ಕೇಳಿಬಂದಿದೆ.
ಮಾಸ್ಟರ್ ಅಂಕುಶ್ ಅಭ್ಯಾಂಕರ್ ಅವರು ರಕ್ತದ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾಯಿಲೆಯು ಮೂತ್ರಪಿಂಡದ ಕಾರ್ಯಕ್ಷಮತೆಗೆ ಹಾನಿ ಉಂಟುಮಾಡುವುದರ ಜೊತೆಗೆ ರಕ್ತದಲ್ಲಿನ ಪ್ಲೇಟ್ಲೆಟ್ಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.ಸದ್ಯ ಅಂಕುಶ್ ಅವರಿಗೆ ಪ್ಲಾಸ್ಮಾಫೆರೆಸಿಸ್ (Plasmapheresis) ಚಿಕಿತ್ಸೆ ನೀಡಲಾಗುತ್ತಿದ್ದು, ಮೂಲ ಕಾಯಿಲೆಯ ನಿಯಂತ್ರಣಕ್ಕಾಗಿ Eculizumab ಇಂಜೆಕ್ಷನ್ ಅಗತ್ಯವಿದೆ.


ಈ ಔಷಧಿ ಅತ್ಯಂತ ದುಬಾರಿಯಾಗಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ.ಅಂಕುಶ್ ಅವರ ಜೆನೆಟಿಕ್ ಮಾದರಿಯನ್ನು ಪರೀಕ್ಷೆಗಾಗಿ ಮುಂಬೈಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಚಿಕಿತ್ಸೆಯ ಸಂಪೂರ್ಣ ಅವಧಿ ಹಾಗೂ ವೆಚ್ಚ ನಿರ್ಧಾರವಾಗಲಿದೆ. ವೈದ್ಯರ ಪ್ರಾಥಮಿಕ ಅಂದಾಜಿನ ಪ್ರಕಾರ ಚಿಕಿತ್ಸೆಗಾಗಿ ಸುಮಾರು ₹15 ಲಕ್ಷದಿಂದ ₹65 ಲಕ್ಷದವರೆಗೆ ವೆಚ್ಚವಾಗುವ ಸಾಧ್ಯತೆ ಇದೆ.
ಪೋಸ್ಟರ್ನಲ್ಲಿ ಒಟ್ಟು ಚಿಕಿತ್ಸಾ ವೆಚ್ಚವನ್ನು ಸುಮಾರು ₹75 ಲಕ್ಷ ಎಂದು ಉಲ್ಲೇಖಿಸಲಾಗಿದೆ.ಹೀಗಾಗಿ ಅಂಕುಶ್ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವುದರ ಜೊತೆಗೆ, ಸಹೃದಯ ದಾನಿಗಳು ತಮ್ಮ ಶಕ್ತ್ಯಾನುಸಾರ ಧನಸಹಾಯ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ದಾನಿಗಳಿಗಾಗಿ ಬ್ಯಾಂಕ್ ವಿವರಗಳು:ಬ್ಯಾಂಕ್: Bank of Barodaಖಾತೆ ಸಂಖ್ಯೆ: 70670100000320IFSC ಕೋಡ್: BARB0VJSHISಖಾತೆದಾರರ ಹೆಸರು: Raghavendra Abhyankarಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9483909770″ಒಂದು ಸಣ್ಣ ಸಹಾಯವೂ ಒಂದು ಜೀವ ಉಳಿಸಬಲ್ಲದು.“









