







ಕರ್ನಾಟಕದ ಇತಿಹಾಸದಲ್ಲೇ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ,ಇದೀಗ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಸೂತ್ರವಾಗಿ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನಡೆ ಅವರ ರಾಜಕೀಯ ಮುತ್ಸದ್ಧಿತನ ಹಾಗೂ ನಿಸ್ವಾರ್ಥ ಮನೋಭಾವಕ್ಕೆ ಸಾಕ್ಷಿ.ಸುದೀರ್ಘ ಅವಧಿಯ ರಾಜಕಾರಣದಲ್ಲಿ ಚಾಣಾಕ್ಷ ರಾಜಕೀಯ ಪಟ್ಟುಗಳನ್ನು ಪ್ರಯೋಗಿಸುವುದರ ಜೊತೆಗೆ,ರಾಜಕಾರಣದಲ್ಲಿ ಇರಬೇಕಾದ ಮೌಲ್ಯಗಳನ್ನು ಪಾಲಿಸಿದ ಅವರ ಗುಣ ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವಂತದ್ದು ಹಾಗೂ ಇಡೀ ದೇಶಕ್ಕೆ ನೀಡಿದ ಮಾದರಿ ಸಂದೇಶವಾಗಿದೆ.


ಸಿದ್ದರಾಮಯ್ಯರವರ ಸಾಧನೆಯ ಹೆಜ್ಜೆಗುರುತುಗಳು ಈ ಶತಮಾನದಾಚೆಗೂ ಸದ್ದು ಮಾಡಲಿದೆ.ಬಸವಣ್ಣನ ಸಂದೇಶ,ಅಂಬೇಡ್ಕರರ ಆಶಯ,ಸಾಂವಿಧಾನಿಕ ಮೌಲ್ಯವನ್ನು ಪಾಲಿಸುತ್ತಾಸೈದ್ಧಾಂತಿಕ ಬದ್ಧತೆಯನ್ನು ಸ್ಪಷ್ಟವಾಗಿ ಕಾಯ್ದುಕೊಳ್ಳುತ್ತಾ ಜನಪರ,ಶೋಷಿತ ಸಮುದಾಯಗಳ ಅಭಿವೃದ್ಧಿಯ ದೃಷ್ಟಿಯಿಂದ ಅವರು ಕೈಗೊಂಡ ಯೋಜನೆಗಳು,ನಾಡಿನ ಸರ್ವತೋಮುಖ ಪ್ರಗತಿಯಲ್ಲಿ ಅವರ ಕೊಡುಗೆಯನ್ನು ನಾವೆಂದೂ ಮರೆಯಬಾರದು ಅವರ ರಾಜಕಾರಣದ ಆದರ್ಶಗಳು ಎಲ್ಲರಿಗೂ ಪ್ರೇರಣದಾಯಿಯಾಗಿರಲಿ ಎಂದು ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ಬೆಳ್ತಂಗಡಿ ತಾಲ್ಲೂಕು ನಿಕಟಪೂರ್ವ ಸಂಚಾಲಕರಾದ ಸಂದೀಪ್ ಸುಂದರ್ ನೀರಲ್ಕೆರವರು ಅಭಿಪ್ರಾಯಪಟ್ಟರು.
ಹಾಗೂಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಹಾಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಆಡಳಿತಾವಧಿಯಲ್ಲಿ ಎಲ್ಲಾ ಕ್ಷೇತ್ರಗಳು ಸರ್ವಾಂಗೀಣ ಪ್ರಗತಿಯಾಗಲಿ ಎಂದು ಹಾರೈಸಿದರು









