ಕುದ್ರಡ್ಕ ಶ್ರೀ‌ ಮಹಾಗಣಪತಿ ಭಜನಾ ಮಂದಿರದಲ್ಲಿ ‌ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ಬೆಳ್ತಂಗಡಿ: ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂದಿರದಲ್ಲಿ ಭಜನಾ ವಿಧ್ಯಾರ್ಥಿಗಳಿಗೆ ಶ್ರೀ ಮಹಾಗಣಪತಿ ಭಜನಾ ಮಂದಿರದ ಅಧ್ಯಕ್ಷರಾದ ವಸಂತ ಮಡೆಕ್ಕಿಲ ಇವರ ಅಧ್ಯಕ್ಷತೆಯಲ್ಲಿ 50 ಭಜನಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿತು.

ರಾಜ್ಯ ಮಟ್ಟದ ಕುಣಿತ ಭಜನಾ ತರಬೇತುದಾರರಾದ‌‌ ಸಂದೇಶ್ ಮದ್ದಡ್ಕ ಇವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಭಜನಾ ತಂಡದ ಅಧ್ಯಕ್ಷೆ ಪ್ರಮೀಳಾ‌ ಕುದ್ರಡ್ಕ, ಮೋಹನಂದಾ ಮಾನ್ಯ,ಸೀತರಾಮ ಪೂಜಾರಿ ಕುದ್ರಡ್ಕ, ಕೇಶವ‌ ಕುದ್ರಡ್ಕ, ಆಕಾಶ್ ಗುರುವಾಯನಕೆರೆ ಹಾಗೂ ‌ಭಜನಾ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.ಸಂಪತ್‌ ಬಂಗೇರ ಪಿಜಕೊಡಂಗೆ ಸ್ವಾಗತಿಸಿ, ಧನ್ಯವಾದವಿತ್ತರು

LEAVE A REPLY

Please enter your comment!
Please enter your name here