







ಬೆಳ್ತಂಗಡಿ ಮೂಲದ ಯುವಕರು ಸೇರಿ ಮೊಬೈಲ್ ಮೂಲಕ ಶಾರ್ಟ್ ಫಿಲ್ಮ್ ರಚಿಸಿದ್ದು, ತಾಯಿ ಮಗನ ಕಥೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಪ್ರಶಂಸೆಗೆ ಪಾತ್ರವಾಗಿದೆ.


ಪ್ರತಿಯೊಂದು ಮನುಷ್ಯರಲ್ಲಿಯೂ ದೇವರನ್ನು ಕಾಣಬೇಕೆನ್ನುವ ಮೌಲ್ಯಯುತವಾದಂತಹ ಕಥೆಯ ಜೊತೆಗೆ ಮಕ್ಕಳಿಗೆ ಪ್ರತಿಯೊಬ್ಬ ತಂದೆ ತಾಯಿಯು ಉತ್ತಮ ಸಮಯ ನೀಡಬೇಕೆಂಬ ಉತ್ತಮ ಸಂದೇಶ ಇರುವ ‘Find’ ಶಾರ್ಟ್ ಫಿಲ್ಮ್, ಮೊಬೈಲ್ ಮೂಲಕವೇ ಚಿತ್ರೀಕರಿಸಿ, ಎಡಿಟ್, ಸೌಂಡ್ ಡಿಸೈನ್ ಮಾಡಿ, Magic touch films ಚಾನಲ್ ಅಡಿಯಲ್ಲಿ YouTube ನಲ್ಲಿ ಬಿಡುಗಡೆ ಹೊಂದಿರುತ್ತದೆ.ಈ ಚಿತ್ರಕ್ಕೆ, ಕಥೆ, ಚಿತ್ರಕಥೆ, ಸಂಕಲನ, ನಿರ್ದೇಶನವನ್ನು Allan Francis ಮಾಡಿದ್ದು, Neon, Derin Alphons Jose, Anjaly SK, Liji, Fr. Biju ಕಲಾವಿದರಾಗಿ ತೆರೆಯಲ್ಲಿ ಮಿಂಚಿದ್ದಾರೆ.









