ತಣ್ಣೀರುಪಂತ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಮಕ್ಕಳ ವ್ಯಕ್ತಿತ್ವ‌ ವಿಕಸನಾ ಸಮಾರೋಪ ಸಮಾರಂಬ ಹಾಗೂ ಭಜನೋಚ್ಚಯ ಕಾರ್ಯಕ್ರಮ: ತಣ್ಣೀರುಪಂಥ ಭಜನಾ ತರಬೇತಿ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನ ಮಕ್ಕಳ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಸಂಪನ್ನ.

0

ನಾಲ್ಕು ದಿನಗಳ ಕಾಲ ಶ್ರೀ ಶಾರದಾಂಬ ಭಜನಾ ಮಂಡಳಿ ತಣ್ಣೀರುಪಂಥ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇವರ ಸಹಯೋಗದೊಂದಿಗೆ ನಡೆದ ಶಿಬಿರದ ಸಮಾರೋಪ ಮತ್ತು ಭಜನೋತ್ಸವ ಕಾರ್ಯಕ್ರಮ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.

ಗುರುವಾಯನಕೆರೆ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮೈರ ಸಭಾಕ್ಷತೆ ಅಧ್ಯಕ್ಷತೆಯನ್ನು ವಹಿಸಿದ್ದರು.ಭಜನಾ ಗುರುಗಳು ಹಾಗೂ ಗುರುವಾಯನಕೆರೆ ತಾಲೂಕು ಪರಿಷತ್ ಕಾರ್ಯದರ್ಶಿಗಳಾದ ಸಂದೇಶ್ ಮದ್ದಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣ್ಯರು ಶುಭ ಹಾರೈಸಿದರು.ಶಿಬಿರಾರ್ಥಿ ಮಕ್ಕಳಿಗೆ ಹಾಗೂ ಪೊಷಕರಿಗೆ ನಡೆಸಲಾಗಿದ್ದ ಸಾಂಸ್ಕೃತಿಕ,ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಸಾಲಿಯಾನ್ ,ಸುನಿಲ್ ಕುಮಾರ್ ಅಗರಿ ಸದಾನಂದ ಶೆಟ್ಟಿ ಮಡಪ್ಪಾಡಿ,ಸುರೇಶ್ ಕಳಾಯಿ, ಚಂದ್ರಹಾಸ್ ಪಕಳ,ಪ್ರಭಾಕರ ಪೊಸಂದೋಡಿ,ಗಂಗಯ್ಯ ನಾಯ್ಕ್,ವಸಂತ ಮಡಕ್ಕಿಲ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪ್ರಸನ್ನ ಗಗನ್ ಚರಣ್ ತನಿಷ್ ಪ್ರಾರ್ಥನೆ ಹಾಡಿದರು.ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಲಾದ ಪ್ರಮಾಣ ಪತ್ರವನ್ನು ನೀಡಲಾಯಿತು.ಭಜೋರೆ ಮಾರುತಿ ಕುಣಿತ ಭಜನಾ ತರಬೇತುದಾರರ ತಂಡ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಅಳಕ್ಕೆ ಭಜನೋತ್ಸವ ನಡೆಯಿತು.

ಊರ ಪರ ಊರ ಅಪಾರ ಭಗವದ್ಭಕ್ತರು ಭಾಗವಹಿಸಿದ್ದರು. ಸಂಘಟಕರು ಹಾಗೂ ಭಜನಾ ಮಂದಿರದ ಅಧ್ಯಕ್ಷರಾದ ಮಿಥುನ್ ಕುಲಾಲ್ ಅಳಕ್ಕೆಯವರು ಸರ್ವರನ್ನು ಸ್ವಾಗತಿಸಿದರು.ಸಿಂಚನ್ ರೈ ಎಕ್ಕಳ ಧನ್ಯವಾದವಿತ್ತರು.ಭಜನಾ ಪರಿಷತ್ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here