ಉಜಿರೆ : ಶ್ರೀ.ಧ. ಮಂ. ಪದವಿ ಪೂರ್ವ ವಸತಿ ಪದವಿ ಪೂರ್ವ ಕಾಲೇಜು; ಹೆತ್ತವರ ಸಮಾಲೋಚನ ಸಭೆ

0

ದ್ವಿತೀಯ ಪಿಯುಸಿಯ 2026-27ರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮತ್ತು ಹೆತ್ತವರಿಗೆ ಶೈಕ್ಷಣಿಕ ಮಾಹಿತಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ರವರು ಮಾತನಾಡಿದರು.ಮಕ್ಕಳಿಗೆ ವಿಧ್ಯೆಯ ಸಲುವಾಗಿ ಹೆತ್ತವರಲ್ಲಿ ಇರುವ ತುಡಿತವೇ ಇಂದು ಸಮಾಜ ಸ್ಪರ್ಧಾತ್ಮಕ ಕಲಿಕೆಯ ಪಥಕ್ಕೆ ಮುಟ್ಟುವಂತೆ ಮಾಡಿದೆ
ಮಕ್ಕಳ ಮೇಲೆ ಎಷ್ಟೇ ನಂಬಿಕೆ ಇದ್ದರೂ,ಚಂಚಲ ಮನಸಿನ ಈ ವಯಸ್ಸಿನ ಮೇಲೆ ಹೆತ್ತವರ ನಿಗಾ ಬೇಕೇ ಬೇಕು. ಆಕರ್ಷಣೆಗೆ, ಚಟ, ವ್ಯಸನಗಳಿಗೆ ಬಲಿ ಬೀಳುವ ಈ ವಯಸ್ಸಿನಲ್ಲಿ ಸಾಧನೆಗೆ ಪೂರಕವಾಗುವ ಮೌಲ್ಯವುಳ್ಳ ಶಿಕ್ಷಣ ಒದಗುವ ಜಾಗ ಅತೀ ಅಗತ್ಯ.ಬೋಧಕರ ಪಾತ್ರವೆಷ್ಟೋ ಅಷ್ಟೇ ಹೆತ್ತವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಕ್ಷಣ ಕ್ಷಣ ನಿರ್ಧಾರ ಬದಲಾಯಿಸದೆ ದೃಢ ನಿರ್ಧಾರ, ಬದುಕಿನಲ್ಲಿ ಗುರಿ ಸಾಧನೆಗೆ ಪೂರಕ. ನಮ್ಮ ಮನಸು ಸೂಪರ್ ಕಂಪ್ಯೂಟರ್, ನನ್ನಿಂದ ಸಾಧ್ಯವೆಂಬ ಅಂಶವನ್ನು ಅಲ್ಲಿ ಅಳವಡಿಸಿ ಕೊಂಡರೆ, ಎಲ್ಲವೂ ಸಾಧ್ಯವೆಂದರು.

ಅತಿಥಿಯಾಗಿ ಆಗಮಿಸಿದ ಎಸ್.ಡಿ.ಎಂ. ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ.ರಾಜಶೇಖರ್ ಹಳೆಮನೆ ಮಾತನಾಡಿ
ಕನಸುಗಳ್ಳಲ್ಲಿ ಸಾಗುತ್ತಿರುವ ಬದುಕನ್ನು, ಸಮಾಜ ವ್ಯವಹಾರವನ್ನಾಗಿಸಿದೆ. ಇಂದು ಮಕ್ಕಳದು ಸಹಜತೆ ಇಲ್ಲದ ಬದುಕು. ಪ್ರೀತಿ, ವಿಶ್ವಾಸ, ಸಂತೋಷದ ದಾರಿಯನ್ನು ನಾವು ಹುಡುಕುವ ಅವಶ್ಯಕತೆ ಇದೆ. ಮೂಲಭೂತ ಅವಶ್ಯಕತೆಯನ್ನು ಮೀರಿದ ಆಸೆಯ ಬದುಕು ನೆಮ್ಮದಿಯನ್ನು ಕಸಿದಿದೆ, ಮೌಲ್ಯ ಕುಸಿಯುತ್ತಿದೆ. ಓದುವ ಕುದಿ, ಕುದಿದು ಪಕ್ವತೆಗಿಂತ ವ್ಯಗ್ರತೆಯ ರೂಪ ತಾಳುತ್ತಿದೆ. ಮಕ್ಕಳ ಹೃದಯ, ಆಲೋಚನೆ, ಮನಸ್ಸು, ಚಿಂತನೆ,ಆಸೆ ಆಕಾಂಕ್ಷೆಗಳನ್ನು ಹೆತ್ತವರು ಅರಿಯುವ ಅಗತ್ಯವಿದೆ. ಮಕ್ಕಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಎಲ್ಲವನ್ನು ಬದಲಾಯಿಸಬಹುದೆಂಬುದು ಸುಳ್ಳು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಬೇಕು.

ವಿದ್ಯಾರ್ಥಿಗಳು ವೈದ್ಯ, ಅಭಿಯಾಂತ್ರಿಕ ಆದರೆ ಮಾತ್ರವೇ ಬದುಕು ಅಲ್ಲ. ಸಂತೋಷ ನೀಡುವ ಮಕ್ಕಳನ್ನು ಒತ್ತಡಕ್ಕೆ ಹಾಕಬೇಡಿ, ಕಳ್ಳರು, ಸುಳ್ಳರು, ಮೋಸಗಾರರಾಗದೆ ಮಕ್ಕಳ ಬದುಕು ನೈತಿಕತೆಯಿಂದ ಕೂಡಿರುವಂತೆ ಕಾಪಾಡುವ ಜವಾಬ್ದಾರಿ ಎಲ್ಲರದ್ದುಯೆಂದರು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೆತ್ತವರ ಜೊತೆಗೆ ಶೈಕ್ಷಣಿಕ ಸಮಾಲೋಚನೆ ನಡೆಸಿ, ಅಗತ್ಯ ಮಾಹಿತಿಗಳನ್ನು ನೀಡಿದರು.

ಕಾಲೇಜಿನ ಉಪಪ್ರಾಂಶುಪಾಲ ಮನೀಶ್ ಕುಮಾರ್ ರವರು ಕಾಲೇಜಿನಲ್ಲಿ ನಡೆಯುವ, ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗಣಕ ಶಾಸ್ತ್ರದ ಉಪನ್ಯಾಸಕರಾದ ಪವಿತ್ರ ಕುಮಾರ್ ಹಾಗೂ ಭೌತಶಾಸ್ತ್ರದ ಉಪನ್ಯಾಸಕ ರಮೇಶ್ ಬಾಬು ಉಪಸ್ಥಿತರಿದ್ದರು.

ಕಾಲೇಜಿನ ರಾಸಾಯನಶಾಸ್ತ್ರ ಉಪನ್ಯಾಸಕಿಯಾದ ಚೈತ್ರ ಪ್ರಭು ಅವರು ಸ್ವಾಗತಿಸಿದರು. ಗಣಿತ ಶಾಸ್ತ್ರ ವಿಭಾಗದ ಪ್ರಿಯ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here