







ಬೆಳ್ತಂಗಡಿ: ಸುಳ್ಳು ಸಾಕ್ಷಿ ಹೇಳುವಂತೆ ಕಲಾವಿದ ಸುಂದರ್ ರೈ ಮಂದಾರ ಅವರಿಗೆ ಬೆದರಿಕೆ ಒಡ್ಡಿದ ಆರೋಪದಡಿ ಮಹೇಶ್ ಶೆಟ್ಟಿ ತಿಮರೋಡಿ, ಸತೀಶ್ ಕುಮಾರ್ ರೈ ಪಡುಮಲೆ, ಕುಡ್ಲ ರಾಂಪೇಜ್ ಬುರh ಯೂ ಟ್ಯೂಬ್ ಚಾನೆಲ್, ಪ್ರಸನ್ನರವಿ ಮತ್ತಿತರರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕೇಸ್ನ ವಿವರ: ಒಳಮೊಗ್ರು ಗ್ರಾಮದ ಮಂದಾರ ಮನೆಯ ನಿವಾಸಿ ಕಲಾವಿದ ಸುಂದರ ರೈ ಮಂದಾರ(೫೫) ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮೇ. ೭ರಂದು ನೀಡಿದ ದೂರಿನಲ್ಲಿ `ನನ್ನ ೯೯೮೦೨೦೨೩೦೮ ಮೊಬೈಲ್ ಫೋನ್ ನಂಬ್ರಕ್ಕೆ ೯೦೮೨೦೯೮೯೩೩ನೇ ನಂಬ್ರದಿಂದ ಸತೀಶ್ ಕುಮಾರ್ ರೈ ಪಡುಮಲೆ ಎಂಬ ಹೆಸರಿನ ವ್ಯಕ್ತಿ ೨೧-೦೪-೨೦೨೬ರಂದು ಕರೆ ಮಾಡಿ ೧೫.೦೪.೨೦೨೬ರಂದು ಮಹೇಶ್ ತಿಮರೋಡಿರವರ ವಿರುದ್ಧ ನಾನು ಕೇಸು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುತ್ತು ಬಳಸಿ ಮಾತನಾಡಿದ್ದಾರೆ. ತಿಮರೋಡಿ ಅವರನ್ನು ಸಮರ್ಥಿಸಿ ನನಗೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಕೇಸು ನೀಡಿದ್ದಕ್ಕೆ ಹೆದರಿಸಿ ಬೆದರಿಸಿದ್ದಾರೆ. ಮುಂಬಯಿಯಲ್ಲಿ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ನನ್ನ ಬಗ್ಗೆ ೨೯-೦೪-೨೦೨೬ರಂದು ಕೆಟ್ಟದಾಗಿ ಬರೆದು ಪ್ರಸಾರ ಮಾಡಿದ್ದಾರೆ. ಇದೇ ರೀತಿ ಕುಡ್ಲ ರಾಮ್ ಪೇಜ್ನವರು ಪ್ರಸನ್ನರವಿ ಮತ್ತು ಇತರರು ಈ ರೀತಿಯ ಪ್ರಯತ್ನ ಮಾಡಿದ್ದಾರೆ.


ಅದೇ ರೀತಿ ತಿಮರೋಡಿಯ ಅನುಯಾಯಿಗಳು ನನ್ನ ಮತ್ತು ಪತ್ನಿಯ ಬಗ್ಗೆ ಅತ್ಯಂತ ಕೆಟ್ಟದಾಗಿ, ಅಶ್ಲೀಲವಾಗಿ ಯಕ್ಷಗಾನದ ಹಾಡು ರಚಿಸಿ ಪ್ರಸಾರ ಮಾಡಿದ್ದಾರೆ. ಈ ಎಲ್ಲಾ ವ್ಯಕ್ತಿಗಳು ತಾವು ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ. ತಿಮರೋಡಿಯ ವಿರುದ್ಧ ನಾನು ದೂರು ದಾಖಲಿಸಿದ ಏಕ ಮಾತ್ರ ಉzಶಕ್ಕೆ ನನ್ನ ಮತ್ತು ಮನೆಯವರ ಬಗ್ಗೆ ಕೀಳು ಪದ ಬಳಕೆ ಮಾಡಿ ಮಾನಸಿಕ ಒತ್ತಡಕ್ಕೆ ಒಳಪಡಿಸಿ ಅವಹೇಳನ ಮಾಡಿ ಬೆದರಿಕೆ ಒಡ್ಡಿದ್ದಾರೆ. ನನಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಕೂಡಾ ತಮಾಷೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಗುರಿಯಾಗಿಸಿ ಸುಳ್ಳು, ತಿರುಚಿದ ಕೆಟ್ಟ ಕೆಟ್ಟ ಕೀಳು ಅಭಿರುಚಿಯ ಸಂದೇಶಗಳನ್ನು ರವಾನಿಸಿದ್ದಾರೆ. ಮಾತ್ರವಲ್ಲದೆ ನನ್ನ ದೈನಂದಿನ ಉತ್ಪತ್ತಿಗೆ ಮತ್ತು ಜೀವನೋಪಾಯಕ್ಕೆ ಕುಂದು ಬರುವಂತೆ ಮಾಡಿದ್ದಾರೆ.
ಈ ಮೂಲಕ ನಾವು ಪೊಲೀಸ್ ಹಾಗೂ ನ್ಯಾಯಾಲಯದ ಮುಂದೆ ನೀಡಿರುವ ಸತ್ಯ ಹೇಳಿಕೆ ಮತ್ತು ದೂರನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಅವರ ಪರವಾಗಿ ಸುಳ್ಳು ಸಾಕ್ಷಿ ನೀಡುವಂತೆ ಒತ್ತಾಯಪಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಮೇ.೭ರಂದು ಅ.ಕ್ರ. ೭೩/೨೦೨೬ರಂತೆ ಬಿಎನ್ಎಸ್ ೩೫೧(೨) ಮತ್ತು ೨೩೨ರಡಿ ಮಹೇಶ್ ಶೆಟ್ಟಿ ತಿಮರೋಡಿ, ಸತೀಶ್ ಕುಮಾರ್ ರೈ ಪಡುಮಲೆ, ಕುಡ್ಲ ರಾಂಪೇಜ್ ಬುರh ಯೂ ಟ್ಯೂಬ್ ಚಾನೆಲ್, ಪ್ರಸನ್ನರವಿ ಮತ್ತಿತರರ ವಿರುದ್ಧ ಕೇಸು ದಾಖಲಿಸಿ ಪುತ್ತೂರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.








