






ಬೆಳ್ತಂಗಡಿ : ರಾಣಿಯಾರ್ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಮೇ 10ರಂದು ತುಂಭೆತ್ತಡ್ಕ ಸಮುದಾಯ ಭವನದಲ್ಲಿ ಅಧ್ಯಕ್ಷ ಮಹಾಬಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಸಮಿತಿಯ ಅಧ್ಯಕ್ಷ ತನಿಯಪ್ಪ ರಾಣಿಯಾರ್, ಉಪಾಧ್ಯಕ್ಷ ರಮೇಶ್ ಕೆ.ಎಸ್., ಶಿವಣ್ಣ ಗುಜ್ಜನಹಳ್ಳಿ,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜೋತಿ, ಅರಸಿನಮಕ್ಕಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರೇಮಚಂದ್ರ ಕೆ., ನಿವೃತ್ತ ಎ.ಡಿ.ಎಂ. ನಾರಾಯಣ ಟಿ., ಪರಮೇಶ್ವರಿ, ಹಾಗೂ ಕಿಟ್ಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಾರ್ಯದರ್ಶಿ ಉಮೇಶ್ 2025-26ನೇ ಸಾಲಿನ ವಾರ್ಷಿಕ ವರದಿ ಹಾಗೂ ಜಮಾ-ಖರ್ಚಿನ ವಿವರ ಮಂಡಿಸಿದರು. ರಾಜ್ಯಾಧ್ಯಕ್ಷ ತನಿಯಪ್ಪ ರಾಣಿಯಾರ್ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಪ್ರೇಮಚಂದ್ರ ಕೆ. ಅವರು ಸರ್ಕಾರದ ಸವಲತ್ತುಗಳನ್ನು ಸಂಘದ ಮೂಲಕ ಪಡೆಯುವ ಕುರಿತು ಸಲಹೆ ನೀಡಿದರು.ರಾಜರಾಮ ಟಿ. ಕಾರ್ಯಕ್ರಮ ನಿರೂಪಿಸಿದರು. ಸುಜಾತ ಧನ್ಯವಾದ ಸಮರ್ಪಿಸಿದರು.









