






ಶಕ್ತಿನಗರ: ಗುರುವಾಯನಕೆರೆಯ ಶಕ್ತಿನಗರದ ಗಣೇಶ್ ನಿಲಯದ ಪುರಂದರ ಶೆಟ್ಟಿಯವರ ಮನೆಯ ಹತ್ತಿರ ತೋಟದಲ್ಲಿ ಪ್ರಾಣಿಗಳಿಂದ ರಕ್ಷಣೆಗಾಗಿ ತೋಟದ ಬೇಲಿಯಲ್ಲಿ ಅಳವಡಿಸಿದ್ದ ಬಲೆಯಲ್ಲಿ ಮೇ.10 ರಂದು ಬೆಳಗ್ಗಿನ ಜಾವ ದೊಡ್ಡ ಗಾತ್ರದ ಹೆಬ್ಬಾವು ಸಿಕ್ಕಿಬಿದ್ದಿತ್ತು.


ಸ್ಥಳಕ್ಕೆ ಆಗಮಿಸಿದ ಪುರಂದರ ಶೆಟ್ಟಿಯವರ ಪುತ್ರರಾದ ಉರಗ ಪ್ರೇಮಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರು ಹೆಬ್ಬಾವನ್ನು ರಕ್ಷಣೆ ಮಾಡಿದ್ದು ಹತ್ತಿರದ ಅರಣ್ಯದಲ್ಲಿ ಬಿಟ್ಟಿದ್ದಾರೆ.









