






ಮುಂಡೂರು : ಮುಂಡೂರು ಕೋಟಿ ಕಟ್ಟೆಯಲ್ಲಿ ನಿರ್ಮಿಸಲಾದ ಶ್ರೀ ಮಹಮ್ಮಾಯಿ ಅಮ್ಮನವರ ನೂತನ ಗುಡಿಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ, ಮಹಾಕುಂಭಾಭಿಷೇಕ ಮೇ 8ರಂದು ವೇ. ಮೂ. ಹರಿಪ್ರಸಾದ್ ಅರ್ಮುಡತ್ತಾಯ ಧರ್ಮಸ್ಥಳ ಇವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.


ಶ್ರೀ ಮಹಮ್ಮಾಯಿ ಸೇವಾ ಸಮಿತಿಯ ಗೌರವ ಮಾರ್ಗದರ್ಶಕರು ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ, ಶ್ರೀ ಮಹಮ್ಮಾಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ಗುರುವಪ್ಪ ಪೂಜಾರಿ ಕೇರಿಯಾರು, ಅಧ್ಯಕ್ಷ ರಾಜೇಂದ್ರ ಪೂಜಾರಿ,ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್ ಕೊಡೆಕ್ಕಾಲು, ಕೋಶಾಧಿಕಾರಿ ಪ್ರಕಾಶ್ ಪೂಜಾರಿ ಕೊಡೈಲ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕಡಂಬು, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಕೋಶಾಧಿಕಾರಿ ಭೋಜ ಪೂಜಾರಿ, ಖಂಡಿಗ ಸಂತಾನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ರಂಗನಾಥ ನೂರಿತ್ತಾಯ, ಮಾರ್ಗದರ್ಶಕರಾ ಧಾರ್ಮಿಕ ಪರಿಷತ್ ಸದಸ್ಯ ಕೆ. ಎಸ್. ಯೋಗೀಶ್ ಕುಮಾರ್ ನಡಕ್ಕರ, ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿ ಆಡಳಿತ ಮೊಕ್ತೇಸರ ರಾಜೀವ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ,ಸುಬ್ರಹ್ಮಣ್ಯ ನೂರಿತ್ತಾಯ, ರತ್ನಾಕರ ನೂರಿತ್ತಾಯ, ಅನಿಲ್ ಕುಮಾರ್ ಕಿನಿಂಜೆ, ವಾಸು ಪೂಜಾರಿ ಕುದ್ಕೊಳಿ, ಅರವಿಂದ ಭಟ್ ಮುಂಡೂರು, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಂದ ಸಾಲಿಯಾನ್, ರಾಜೀವ್ ಸಾಲಿಯಾನ್ ನಾನಿಲ್ತ್ಯಾರು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ನೀತಾ ಮಹೇಶ್ ಕುಮಾರ್ ನಡಕ್ಕರ, ಗುರುವಪ್ಪ ಪೂಜಾರಿ ಉಜಿರೆಬೈಲ್, ಚಾಮರಾಜ ಸೇಮಿತ ಮುಂಡೂರು, ಅನಿತಾ ಗುರುವಪ್ಪ ಪೂಜಾರಿ, ಸುಧಾಮಣಿ, ಹರಿಶ್ಚಂದ್ರ ಬಳ್ಳಿದಡ್ಡ, ಇಂದಿರಾ ಕೊಡೈಲು, ಪರಿಚಾರಕ ಶೇಖರ ನಾಯ್ಕ, ಮೇಲಂತಬೆಟ್ಟು ನಾಗಬ್ರಹ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ ಪೂಜಾರಿ, ಸಮಿತಿಯ ಪದಾಧಿಕಾರಿಗಳು ಸದಸ್ಯರು ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸಹಕರಿಸಿದರು.ಈ ಸಂದರ್ಭದಲ್ಲಿ ಜೀರ್ಣೋದ್ದಾರ ಕಾರ್ಯದಲ್ಲಿ ಕೈ ಜೋಡಿಸಿದ ದಾನಿಗಳನ್ನು, ಸಮಿತಿಯ ಪದಾಧಿಕಾರಿಗಳನ್ನು , ಮಾಜಿ ಪದಾಧಿಕಾರಿಗಳನ್ನು ಗೌರವಿಸಲಾಯಿತು.ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.









