






ಶಿಬಾಜೆ, ಮೇ 6 : ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನ ಶಿಬಾಜೆಯಲ್ಲಿ ರಾಜಾಂಗಣದ ಛಾವಣಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ದೇವಸ್ಥಾನದ ಪೂರ್ವ ಭಾಗದ ಅಂಗಣಕ್ಕೆ ಛಾವಣಿ ನಿರ್ಮಾಣ ಮಾಡುವ ದ್ವಿತೀಯ ಹಂತದ ಕಾಮಗಾರಿಗೆ ಇಂದು (ಮೇ 6) ಶುಭ ದಿನದಂದು ಚಾಲನೆ ನೀಡಲಾಯಿತು.


ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಂಡಿರುವ ಸಮಿತಿ, ಭಕ್ತರಿಗೆ ಉತ್ತಮ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಆರಂಭಿಸಿದೆ. ಪೂರ್ವ ಅಂಗಣದ ಛಾವಣಿ ನಿರ್ಮಾಣದಿಂದ ಮಳೆ ಹಾಗೂ ಬಿಸಿಲಿನ ತೊಂದರೆ ನಿವಾರಣೆಯಾಗಲಿದ್ದು, ಜಾತ್ರೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ ಸದಸ್ಯರು, ಭಕ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಕಾಮಗಾರಿಗೆ ಶುಭಾರಂಭ ಕೋರಿದರು. ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸಹ ಭಕ್ತರಿಂದ ಸಹಕಾರ ಮುಂದುವರಿಯಲಿ ಎಂದು ಸಮಿತಿಯವರು ಮನವಿ ಮಾಡಿದ್ದಾರೆ.









