







ಕೊಯ್ಯೂರು: ಇಲ್ಲಿಯ ಡೆಂಬುಗ ಕಜೆ ಲಿಂಗಪ್ಪ ಗೌಡರ ನೂತನ ಮನೆ ಗೃಹಪ್ರವೇಶದ ಮೊದಲನೆಯ ದಿನ ವಾಸ್ತು ಪೂಜೆಯ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಾಲ್ ಕೊಯ್ಯೂರು ಇದರ ಸಹಕಾರದೊಂದಿಗೆ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ಇವರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿಗಳ ಒಗ್ಗೂಡುವಿಕೆಯೊಂದಿಗೆ ವಿಶೇಷ ಭಜನೋತ್ಸವ ಕಾರ್ಯಕ್ರಮ ನಡೆಯಿತು.


ಭಜನಾಮೃತಾ ಭಜನಾ ತಂಡ ಕಡಬ ಇವರ ಭಜನಾ ಹಾಡುಗಾರಿಕೆ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಕಮ್ಮಟದ ಕುಣಿತ ಭಜನಾ ಗುರು ಸಂದೇಶ ಮದ್ದಡ್ಕ ಹಾಗೂ ತಂಡದವರ ಸಹಕಾರದೊಂದಿಗೆ ಕುಣಿತ ಭಜನೆ ನಡೆಯಿತು.









