







ಬೆಳ್ತಂಗಡಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಬಹುಮತ ಪಡೆಯುತಿದ್ದಂತೆ ಬೆಳ್ತಂಗಡಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ವಿಜಯೋತ್ಸವ ಬೆಳ್ತಂಗಡಿ ಬಿಜೆಪಿ ಕಚೇರಿ ಎದುರು ನಡೆಯಿತು.
ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಾತನಾಡಿ ಪಂಚ ರಾಜ್ಯಗಳಲ್ಲಿ ಅಭೂತಪೂರ್ವ ಕೆಲವು ಸಾಧಿಸಿದೆ. ಪಶ್ಚಿಮಬಂಗಾಳದಲ್ಲಿ ಭಯೋತ್ಪಾದನೆಯ 15 ವರ್ಷದ ಆಡಳಿತವನ್ನು ಜನಸಾಮಾನ್ಯರು ಕಿತ್ತು ಭಾರತೀಯ ಜನತಾ ಪಾರ್ಟಿಗೆ 200 ಸ್ಥಾನಗಳನ್ನು ಕೊಟ್ಟು ಗೆಲುವು ಸಾಧಿಸಿದ್ದಾರೆ.ಪುದುಚೇರಿ, ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆದಿದೆ.


ಪಂಚ ರಾಜ್ಯ ಚುನಾಣೆಯಲ್ಲಿ ಸಬ್ಕಾ ಸಾಥ್, ಸಬ್ಕಾ ವಿಕಾಸ್ಎಂಬ ಮಂತ್ರ ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದೆ. ನರೇಂದ್ರ ಮೋದಿಯವರ ನಾಯಕತ್ವ ವಿಶ್ವಕ್ಕೆ ಮಾದರಿಯಾಗಿದೆ. ಐದು ರಾಜ್ಯಗಳಲ್ಲಿ ಮೂರು ರಾಜ್ಯದಲ್ಲಿ ಗರಿಷ್ಠ ಬಹುಮತ ಪಡೆದಿದೆ. ಈ ಚುನಾವಣೆಯನ್ನು ಬೆಳ್ತಂಗಡಿ ಮಂಡಲದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮುಖಾಂತರ ಸಂಭ್ರಮಿಸುತ್ತಿದೆ.
ಈ ಚುನಾವಣಾ ಫಲಿತಾಂಶವನ್ನು ಇಡೀ ದೇಶ ಸಂಭ್ರಮವನ್ನು ಆಚರಿಸುತ್ತಿದೆ ಎಂದರು. ಪ್ರಮುಖರಾದ ಪ್ರಸಾದ್ ಕುಮಾರ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮನ್ ಕೀ ಬಾತ್ ಜಿಲ್ಲಾ ಪ್ರಭಾರಿ ಸೀತಾರಾಮ್ ಬೆಳಾಲು, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಯುವಮೋರ್ಚಾ ಮೋರ್ಚಾ ಉಪಾಧ್ಯಕ್ಷ ಗಣೇಶ್ ಲಾಯಿಲ, ಕಾರ್ಯದರ್ಶಿ ಜಗದೀಶ್ ಕನ್ನಾಜೆ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ, ನಗರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಶರತ್, ಗಿರೀಶ್ ಡೋಂಗ್ರೆ ಲಾಯಿಲ, ಸುಧಾಕರ್ ಬಿ. ಎಲ್, ವಿಠಲ್ ಗುರುವಾಯನಕೆರೆ, ಮಹೇಶ್, ಪ್ರಮುಖರು ಉಪಸ್ಥಿತರಿದ್ದರು.









