ಓಡಲ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವರ್ಧoತ್ಯುತ್ಸವ, ನೇಮೋತ್ಸವ

0

ಉಜಿರೆ : ಇಲ್ಲಿಯ ಓಡಲ ಚಾಮುಂಡಿ ನಗರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದ ಮೂರ್ತಿ ಪಿ. ರಾಜಗೋಪಾಲ ಯಡಪಡಿತ್ತಾಯ ಇವರ ನೇತೃತ್ವದಲ್ಲಿ ಎ. 29ರಂದು ಪ್ರತಿಷ್ಠಾ ವರ್ಧoತ್ಯುತ್ಸವ ವಿವಿಧ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಿಗ್ಗೆ ಪಂಚಗವ್ಯ, ಪುಣ್ಯಾಹ, ಕಲಶ ಪ್ರತಿಷ್ಠೆ, ಗಣಪತಿ ಹೋಮ, ಕಲಶಾಭಿಷೇಕ, ಶ್ರೀ ಶಿವ ಪಾರ್ವತಿ ಭಜನಾ ಮಂಡಳಿ ಚಾಮುಂಡಿ ನಗರ ಇವರಿಂದ ಭಜನಾ ಕಾರ್ಯಕ್ರಮ, ಬಳಿಕ ಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿ ಜ್ಯೋತಿ ನಗರ ಮಾಚಾರು ಇವರಿಂದ ಕುಣಿತ ಭಜನೆ, ಮಧ್ಯಾಹ್ನ ಪರ್ವ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃಕ ವೈವಿಧ್ಯ, ರಾತ್ರಿ 7.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 8ಕ್ಕೆ ಭಂಡಾರ ತೆಗೆದು ದೈವಕ್ಕೆ ಎಣ್ಣೆ ಬೂಳ್ಯ, ನಂತರ ಕ ಪಲ್ಲವಿ ಕಲಾವಿದೆರ್ ಕಾರ್ಕಳ ಇವರಿಂದ ವಿಭಿನ್ನ ಶೈಲಿಯ ಭಕ್ತಿ ಪ್ರಧಾನ ಪೌರಾಣಿಕ ತುಳು ನಾಟಕ ” ಶಿವ ಭಕ್ತ ಮಾರ್ಕoಡೇಯ” ಪ್ರದರ್ಶನ ಗೊಂಡಿತು.ರಾತ್ರಿ 10.30 ರಿಂದ ಶ್ರೀ ವ್ಯಾಘ್ರ ಚಾಮುಂಡಿ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ,ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟೇಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಉಪಾಧ್ಯಕ್ಷ ಹರೀಶ್ ಕಾವ, ಕಾರ್ಯದರ್ಶಿ ಪರಮೇಶ್ವರ, ಕೋಶಾಧಿಕಾರಿ ಸುರೇಶ್ ಗೌಡ, ಟ್ರಷ್ಟಿಗಳಾದ ಶ್ರೀನಿವಾಸ ಗೌಡ ಮಧುರ, ವಿದ್ಯಾಕುಮಾರ್ ಕಾಂಚೋಡು, ವಿನಯಚಂದ್ರ, ಸುರೇಶ್ ಆಚಾರ್, ಚಿತ್ರೀಶ್ ಶೆಟ್ಟಿ, ವಿಶಾಲಾಕ್ಷಿ ರಾಮಣ್ಣ ನಾಯ್ಕ, ಅಣ್ಣಿ ಗೌಡ ಮೈಂದ್ರೇಲ್, ಸರಸ್ವತಿ ಶೆಟ್ಟಿ, ಖಾಯಂ ಆಹ್ವಾನಿತರಾದ ಪದ್ದಣ್ಣ ಗೌಡ, ಪುಷ್ಪ ಶ್ರೀನಿವಾಸ್ ಗೌಡ, ಪ್ರತಿಷ್ಠಾವರ್ಧ0ತಿ ಸಮಿತಿ ಸದಸ್ಯರು, ಸೇವಾಕರ್ತರು ಸಾಂಸ್ಕೃತಿಕ ಕಾರ್ಯಕ್ರಮದ ಸೇವಾಕರ್ತರು, ಊರ ಪರ ಊರ ಭಕ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here