ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಾಣಿ ವಿದ್ಯಾಸಂಸ್ಥೆಯ ಪ್ರಾಪ್ತಿ ಎಂ ಗೌಡ ಅವರಿಗೆ ವಾಣಿ ವಿದ್ಯಾ ಸಂಸ್ಥೆ ವತಿಯಿಂದ ಸನ್ಮಾನ

0

ಇತ್ತೀಚೆಗೆ ಪ್ರಕಟವಾದ 2026ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಇಲ್ಲಿನ ವಾಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕು. ಪ್ರಾಪ್ತಿ ಎಂ ಗೌಡ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.

ಪ್ರಾಪ್ತಿ ರಾಜ್ಯಮಟ್ಟದಲ್ಲಿ 6ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 4ನೇ ಸ್ಥಾನ ಹಾಗೂ ತಾಲ್ಲೂಕು ಮಟ್ಟದಲ್ಲಿ 2ನೇ ಸ್ಥಾನ ಗಳಿಸುವುದರ ಜೊತೆಗೆ, ವಾಣಿ ವಿದ್ಯಾಸಂಸ್ಥೆಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.ವಿದ್ಯಾರ್ಥಿನಿಯ ಈ ಅಪ್ರತಿಮ ಸಾಧನೆಯನ್ನು ಗುರುತಿಸಿ ವಾಣಿ ವಿದ್ಯಾಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕುಶಾಲಪ್ಪಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಕೆ.ಎಂ. ಶ್ರೀನಾಥ್, ಕಾಲೇಜಿನ ಆಡಳಿತ ಅಧಿಕಾರಿ ಪ್ರಸಾದ್ ಗೌಡ, ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ ಕೆ ಹಾಗೂ ಕಾಲೇಜಿನ ಸಮಸ್ತ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here