







ಬೆಳ್ತಂಗಡಿ: ಸ್ಥಳೀಯ ಜೆಸಿಐ ಉಜಿರೆ ಸಿಟಿ ಘಟಕದ ವತಿಯಿಂದ ಬೆಳ್ತಂಗಡಿಯ ಮಾದರಿ ಶಾಲೆಯಲ್ಲಿ ಆಯೋಜಿಸಲಾದ ‘ಝೇಂಕಾರ’ ಬೇಸಿಗೆ ಶಿಬಿರದ ವೇದಿಕೆಯಲ್ಲಿ, ಸಮಾಜದ ನಿಷ್ಠಾವಂತ ಸೇವಕ ಉಜಿರೆ ಮೆಸ್ಕಾಂ ಪವರ್ಮ್ಯಾನ್ ಉತ್ತಂಗಿ ಬಾರಿಕರಿ ಬಸವರಾಜ್ ಅವರಿಗೆ ‘ಶೈನಿಂಗ್ ಸ್ಟಾರ್’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಶಿಬಿರವನ್ನು ಜೆಸಿಐ ಉಜಿರೆ ಸಿಟಿ ಘಟಕದ ಲೇಡಿ ಕೋ-ಆರ್ಡಿನೇಟರ್ ಆದ ಹೇಮಾವತಿ ಅವರ ನೇತೃತ್ವದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಮಕ್ಕಳ ಜ್ಞಾನ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುವ ವಿವಿಧ ಚಟುವಟಿಕೆಗಳು ನಡೆಯುತ್ತಿವೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಜಿರೆ ಸಿಟಿ ಅಧ್ಯಕ್ಷರಾದ ಮಹಮ್ಮದ್ ಮಿರ್ಷಾದ್ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಜೆಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅವನೀಶ್ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್ ಉಪಸ್ಥಿತರಿದ್ದರು.
ಸನ್ಮಾನಿತರಾದ ಬಸವರಾಜ್ ಅವರ ತಂದೆ-ತಾಯಿ, ಪತ್ನಿ ಹಾಗೂ ಮಕ್ಕಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಕಳೆದ ಹಲವು ವರ್ಷಗಳಿಂದ ಉಜಿರೆ ಪರಿಸರದಲ್ಲಿ ಹಗಲಿರುಳು ನಿಷ್ಠಾವಂತ ಸೇವೆ ಸಲ್ಲಿಸುತ್ತಿರುವ ಬಸವರಾಜ್ ಅವರ ಶ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಸದಸ್ಯರು ಹಾಗೂ ‘ಝೇಂಕಾರ’ ಶಿಬಿರದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸನ್ಮಾನಿತರನ್ನು ಅಭಿನಂದಿಸಿದರು.









