ಇಂದಬೆಟ್ಟು ಅಪಘಾತಕ್ಕೀಡಾದ ಪ್ರದೀಪ್ ದೇವಾಡಿಗ ಕುಟುಂಬಕ್ಕೆ ಆರ್ಥಿಕ ನೆರವು

0

ಇಂದಬೆಟ್ಟು: ಬಂಗಾಡಿ ಲಿಂಗತ್ಯಾರು ನಿವಾಸಿ ಪ್ರದೀಪ್ ಯಾನೆ ಪ್ರದೀನ್ ದೇವಾಡಿಗ ಅವರು ಏ.16 ರಂದು ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಗೆಲ್ಲು ಬಿದ್ದು ಕೈ ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದರು.

ಪ್ರಸ್ತುತ ಇವರು ನಗರದ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಕುಟುಂಬವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು.ಪ್ರದೀಪ್ ಅವರ ಕಷ್ಟದ ಪರಿಸ್ಥಿತಿಯನ್ನು ಅರಿತ ಗ್ರಾಮದ ಸ್ಥಳೀಯರು ಒಗ್ಗೂಡಿ ಸುಮಾರು 65,000/- ರೂ. ಧನ ಸಹಾಯವನ್ನು ಸಂಗ್ರಹಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸಹನಶ್ರೀ ಫೌಂಡೇಶನ್ ಅಧ್ಯಕ್ಷ ರಾಜೇಶ್ ಪುದುಶೇರಿಯವರು 25,000/- ರೂ. ಗಳ ಚೆಕ್ ನೀಡಿದ್ದಾರೆ. ಅಲ್ಲದೆ, ಪ್ರಗತಿ ರೈಸ್ ಮಿಲ್ ಮಾಲೀಕ ಅಬ್ದುಲ್ ಸತ್ತಾರ್ ಅವರು 10,000/- ರೂ. ಗಳ ನೆರವು ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ಒಟ್ಟು ಮೊತ್ತವನ್ನು ಸಂಕಷ್ಟದಲ್ಲಿರುವ ಪ್ರದೀಪ್ ಅವರಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here