







ಕಲ್ಮಂಜ ಗ್ರಾಮದ ನಿಡಿಗಲ್ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ಏ.24 ರಂದು ಮುಂಜಾನೆ ನಡೆದಿದೆ.ಬೆಳಗಿನ ಜಾವ 4 ಗಂಟೆಗೆ ಅರ್ಚಕರು ದೇವಸ್ಥಾನದ ಬಾಗಿಲು ತೆಗೆಯುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.



ಕಳ್ಳರು ಒಳಗೆ ಇರುವುದು ತಿಳಿದು ಅರ್ಚಕರು ಸ್ಥಳೀಯ ನಿವಾಸಿಯನ್ನು ಕರೆದುಕೊಂಡು ಬರುವ ವೇಳೆಯಲ್ಲಿ ದೇವಸ್ಥಾನದ ಒಳಗಿನ ಹಂಚು ತೆಗೆದು ಪರಾರಿಯಾಗಿದ್ದಾರೆ ಎಂದು ಸತ್ಯ ಭಟ್ ಇವರು ಸುದ್ದಿ ಬಿಡುಗಡೆಗೆ ಮಾಹಿತಿ ನೀಡಿದ್ದಾರೆ, ಈ ಪರಿಸರದ ಎರಡು ದಿನಗಳ ಹಿಂದೆ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದದಲ್ಲಿ ಕಳ್ಳತನ ನಡೆದಿತ್ತು,









