ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ 2026-27ನೇ ಸಾಲಿನ ದಾಖಲಾತಿ ಆರಂಭ: ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ’ ಬಾಂಡ್‌ನ ವಿಶೇಷ ಕೊಡುಗೆ!

0

ಬೆಳ್ತಂಗಡಿ/ಕನ್ಯಾಡಿ: ಅಕ್ಷಯ ತೃತೀಯದ ಈ ಶುಭ ಸಂದರ್ಭದಲ್ಲಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕನ್ಯಾಡಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ಹೊಸ ಹಂತಕ್ಕೆ ಕಾಲಿಟ್ಟಿದೆ.

2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆಯು ಚಾಲನೆಗೊಂಡಿದ್ದು, ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಆಕರ್ಷಕ ಸೌಲಭ್ಯಗಳನ್ನು ಘೋಷಿಸಲಾಗಿದೆ.ಈ ಅಕ್ಷರ ದೇಗುಲವು “ಮೌಲ್ಯದೊಂದಿಗೆ ಗುಣಾತ್ಮಕ ಶಿಕ್ಷಣ” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, 1 ರಿಂದ 5ನೇ ತರಗತಿಯವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ದ್ವಿಭಾಷಾ ಬೋಧನೆಯ ಸೌಲಭ್ಯ ಹೊಂದಿದೆ. ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್ ಹಾಗೂ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಶಾಲೆಯ ವಿಶೇಷತೆಯೆಂದರೆ, ಇಲ್ಲಿ ಸತತ 5 ವರ್ಷ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ವತಿಯಿಂದ 1,000 ರೂಪಾಯಿಗಳ ‘ವಿದ್ಯಾನಿಧಿ’ ಬ್ಯಾಂಕ್ ಬಾಂಡ್ ನೀಡಲಾಗುವುದು. ಇದು ಮಕ್ಕಳ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಧನವಾಗಲಿದೆ. ಕೇವಲ ಪಠ್ಯವಲ್ಲದೆ ಯೋಗ, ಕರಾಟೆ, ಸಂಗೀತ, ಚಿತ್ರಕಲೆ ಹಾಗೂ ಕ್ರೀಡೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.ದಾಖಲಾತಿ ವಯೋಮಿತಿ:LKG: 4 ವರ್ಷ ತುಂಬಿರಬೇಕು.UKG: 5 ವರ್ಷ ತುಂಬಿರಬೇಕು.1ನೇ ತರಗತಿ: 5 ವರ್ಷ 10 ತಿಂಗಳು ಪೂರೈಸಿರಬೇಕು.ಹೆಚ್ಚಿನ ಮಾಹಿತಿಗಾಗಿ ಪೋಷಕರು ಶಾಲೆಯ ಮುಖ್ಯೋಪಾಧ್ಯಾಯರನ್ನು (72598 28859) ಅಥವಾ SDMC ಅಧ್ಯಕ್ಷರನ್ನು (90080 61533) ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here