ಉಜಿರೆ ಬೆನಕ ಹೆಲ್ತ್ ಸೆಂಟರ್ ಔಷಾಧಾಲಯ ನೂತನ ವಿಶಾಲ ಸ್ಥಳದಲ್ಲಿ ಉದ್ಘಾಟನೆ ಔಷಧಾಲಯವು ಆಸ್ಪತ್ರೆಯ ಜೀವನಾಡಿ “ಡಾ. ಗೋಪಾಲಕೃಷ್ಣ.ಕೆ

0

ಉಜಿರೆ: ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಎ. 19 ರಂದು ಆಸ್ಪತ್ರೆಯ ಔಷಧಾಲಯವನ್ನು ನೂತನವಾಗಿ ಸಜ್ಜುಗೊಂಡ ಮತ್ತು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.ಸ್ಥಳಾಂತರಗೊಂಡ ಔಷಧಾಲಯ (ಫಾರ್ಮಸಿ)ಯನ್ನು ಹಿರಿಯರಾದ ಸೀತಾರಾಮ.ಭಟ್.ಕೆ ಇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ. ಕೆ. ಮಾತನಾಡುತ್ತ ನಮ್ಮ ಆಸ್ಪತ್ರೆಯ ಔಷಧಾಲಯವನ್ನು ವಿನೂತನವಾಗಿ ನಿರ್ಮಿಸಿದ ಮತ್ತು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸಿ ದಿನದ 24 ಗಂಟೆಗಳ ಕಾಲ ಕಾಲ (24×7) ಈ ಭಾಗದ ಸಾರ್ವಜನಿಕರಿಗೆ ಸೇವೆ ಸಲ್ಲಿಸಬೇಕೆಂಬ ನನ್ನ ಕನಸು ಈ ದಿನ ನನಸಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಯಾಕೆಂದರೆ ಔಷಧಾಲಯವು ಯಾವುದೇ ಆಸ್ಪತ್ರೆಯ ಜೀವನಾಡಿಯಾಗಿರುತ್ತದೆ. ರೋಗಿಗಳಿಗೆ ಕ್ಲಿಷ್ಟ ಸಮಯದಲ್ಲಿ ಔಷಧಿಗಳನ್ನು ವಿತರಿಸಲು ಈಗಿನ ವ್ಯವಸ್ಥೆ ತುಂಬ ಅನುಕೂಲವಾಗಿದೆ ಎಂದು ತಿಳಿಸಿದರು.

ಉದ್ಘಾಟಕ ಸೀತಾರಾಮ.ಭಟ್.ಕೆ. ಆಸ್ಪತ್ರೆಯ ಏಳಿಗೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಮತ್ತು ಇದರಿಂದ ಎಲ್ಲರಿಗೂ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ಡಾ.ಭಾರತೀ.ಜಿ.ಕೆ, ಡಾ.ಆದಿತ್ಯ ರಾವ್, ಡಾ.ಅಂಕಿತ ಜಿ ಭಟ್, ಡಾ.ನವ್ಯ ಭಟ್, ಡಾ.ಶ್ರೀಹರ್ಷ ತುಲುಪುಲೆ, ಡಾ.ದೀಕ್ಷಿತ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here