ಸಿಆರ್ ಇಇ ಸೇಲ್ ದ ಕ ಇಲ್ಲಿಗೆ ಅಗತ್ಯ ಸಿಬ್ಬಂದಿ ಸೇಮಿಸುವಂತೆ ಉಸ್ತುವಾರಿ ಸಚಿವರಿಗೆ ಜಿಲ್ಲಾ ಕೆ ಡಿ ಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲ ಇವರಿಂದ ಮನವಿ

0

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರಕರಣಗಳ ಪೋಲಿಸ್ ಠಾಣೆಯಾಗಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದ.ಕ ಇಲ್ಲಿಗೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಜಿಲ್ಲಾ ಕೆಡಿಪಿ ಸದಸ್ಯ , ನ್ಯಾಯವಾದಿ ಸಂತೋಷ್ ಕುಮಾರ್ ಮಂಗಳೂರಿನಲ್ಲಿ ಏ.18ರಂದು ಭೇಟಿಯಾಗಿ ಮನವಿ ಸಲ್ಲಿಸಿದರು.

ದ.ಕ ಜಿಲ್ಲೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮಂಗಳೂರು ಇದರ ವ್ಯಾಪ್ತಿಗೆ ಜಿಲ್ಲೆಯ 42 ಪೋಲಿಸ್ ಠಾಣೆಗಳು ಒಳಪಡುತ್ತಿದ್ದು , ಘೋಷಣೆಯಾಗಿರುವ ಇನ್ನೂ ಎರಡು ಹೊಸ ಪೋಲಿಸ್ ಠಾಣೆಯಲ್ಲಿ ಹೊಸದಾಗಿ ಸ್ಥಾಪನೆಯಾದರೆ ಒಟ್ಟು 44 ಪೋಲಿಸ್ ಠಾಣೆಗಳು ಇದರ ವ್ಯಾಪ್ತಿಗೆ ಒಳಪಡುತ್ತದೆ.

ಇದನ್ನು ಈಗಾಗಲೇ ರಾಜ್ಯ ಸರ್ಕಾರ ಪ.ಜಾತಿ/ ಪಂಗಡಗಳ ದೌರ್ಜನ್ಯ ತಡೆ ಪೋಲಿಸ್ ಠಾಣೆಯಾಗಿ ಪರಿವರ್ತನೆಗೊಳಿಸಿದೆ‌. ಪ.ಜಾತಿ/ ಪಂಗಡಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಕರಣಗಳ ದಾಖಲು ಸೇರಿದಂತೆ ತನಿಖೆ, ಬಂಧನ ಸೇರಿದಂತೆ ಅಂತಿಮ ವರದಿಯ ತನಕದ ಎಲ್ಲಾ ಕೆಲಸವನ್ನು ಮಾಡಬೇಕಾಗಿದೆ. ಸದ್ಯ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಈ ಪೋಲಿಸ್ ಠಾಣೆಯಲ್ಲಿ ತೀವ್ರ ಸಿಬ್ಬಂದಿಗಳ ಕೊರತೆಯಿದೆ.

ಪ್ರಸ್ತುತ ಇಲ್ಲಿ ಓರ್ವ ಪೋಲಿಸ್ ವರಿಷ್ಠಾಧಿಕಾರಿ , ಓರ್ವ ಪೋಲಿಸ್ ಇನ್ಸ್‌ಪೆಕ್ಟರ್ , ಓರ್ವ ಸಬ್ ಇನ್ಸ್‌ಪೆಕ್ಟರ್ , 3 ಹೆಡ್ ಕಾನ್ಸ್‌ಟೇಬಲ್ , 6 ಕಾನ್ಸ್‌ಟೇಬಲ್ ಮಾತ್ರ ಇರುವುದಾಗಿದೆ. ಇದರಿಂದಾಗಿ ಇಲ್ಲಿ ದಾಖಲಾಗುವ ಪ್ರಕರಣಗಳ ತನಿಖೆಯಲ್ಲಿ ವಿಳಂಬ , ನ್ಯಾಯದ ವಿಳಂಬ ಆಗುತ್ತಿದೆ. ಇಲ್ಲಿಗೆ ಅಗತ್ಯವಿರುವ ಡಿವೈಎಸ್ಪಿ ಹುದ್ದೆಯೂ ಖಾಲಿಯಾಗಿದೆ ಎಂದು ಸಮಸ್ಯೆಯ ಗಂಭೀರತೆಯನ್ನು ಸರ್ಕಾರದ ಪರವಾಗಿ ಸಚಿವರ ಗಮನ ಸೆಳೆದಿದ್ದಾರೆ.

ಸಮಸ್ಯೆಯ ಗಂಭೀರತೆಯನ್ನು ಅರಿತ ಸಚಿವರು ಈ ಕುರಿತು ಗೃಹ ಸಚಿವ , ಸಮಾಜ ಕಲ್ಯಾಣ ಸಚಿವರ ಜೊತೆಗೆ ಮಾತುಕತೆ ನಡೆಸಿ ಸೂಕ್ತ ಸಿಬ್ಬಂದಿಗಳನ್ನು ನೇಮಕ ಮಾಡುವ ಬಗ್ಗೆ ಬರವಸೆ ನೀಡಿದರು.

LEAVE A REPLY

Please enter your comment!
Please enter your name here