ಉಜಿರೆ: ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ‘ದಶ ಹೆಜ್ಜೆ – ದಶಕದ ಸಂಭ್ರಮ’ ಹಾಗೂ ‘ಸ್ಟಾರ್ ನೈಟ್’- ಯುವ ಶಕ್ತಿಯನ್ನು ಒಟ್ಟುಗೂಡಿಸುವ ಕೆಲಸ ನಡೆದಿದೆ: ಶರತ್‌ಕೃಷ್ಣ ಪಡುವೆಟ್ನಾಯ

0

ಉಜಿರೆ: ಕಲಾ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಜಿರೆಯ ಖ್ಯಾತ ನೃತ್ಯ ತಂಡ ‘ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ’ (Hipboyz Dance Crew) ತನ್ನ ಯಶಸ್ವಿ ಹತ್ತು ವರ್ಷಗಳ ಸಂಭ್ರಮದ ಪ್ರಯುಕ್ತ ‘ದಶ ಹೆಜ್ಜೆ – ದಶಕದ ಸಂಭ್ರಮ’ ಹಾಗೂ ‘UJIRE Star Night DANCE SHOWCASE’ ಕಾರ್ಯಕ್ರಮವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಏ.18ರಂದು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಉದ್ಘಾಟಿಸಿದರು.

15 ಮಕ್ಕಳಿಂದ ಪ್ರಾರಂಭವಾಗಿ 150ಕ್ಕೂ ಹೆಚ್ಚು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ ಬಂದಿರುವ ಈ ತಂಡವು 2015ರಲ್ಲಿ ಸ್ಥಾಪನೆಯಾಗಿದ್ದು, ಇದೀಗ ದಶಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಿದೆ.


ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಅದ್ಧೂರಿ ನೃತ್ಯ ಪ್ರದರ್ಶನ ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಬಿನುತಾ ಬಂಗೇರ, ನ್ಯಾಯವಾದಿ ಬಿ.ಕೆ. ಧನಂಜಯ್ ರಾವ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸಿ.ಕೆ. ಚಂದ್ರಕಲಾ, ಪುನೀತಾ ಪ್ರಭಾಕರ್ ಹಾಗೂ ನೃತ್ಯ ನಿರ್ದೇಶಕ ಕೃಷ್ಣ ಕುಮಾರ್, ತಂಡದ ಸ್ಥಾಪಕರು ಮತ್ತು ನೃತ್ಯ ನಿರ್ದೇಶಕ ಸಹನ್ ಎಮ್. ಎಸ್ ಉಜಿರೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಿರಣ್ ನಿರೂಪಿಸಿ, ರವಿ ವಂದಿಸಿದರು.

LEAVE A REPLY

Please enter your comment!
Please enter your name here