






ಉಜಿರೆ : ಗುರಿಪಳ್ಳ ಕೊಡ್ಡೋಲು ಮನೆಯ ಪ್ರಗತಿಪರ ಕೃಷಿಕ, ಹೈನುಗಾರ ಯಶೋಧರ ಗೌಡ ಅವರ 6ವರ್ಷದ ಧನದ ಹೊಟ್ಟೆಯಲ್ಲಿ ಕಳೆದ 25ದಿನ ಗಳಿಂದ ಹೊಟ್ಟೆಗೆ ಆಹಾರ ತಿನ್ನದೇ ಪರದಾಡುತ್ತಿದ್ದು ಪಶುವೈದ್ಯ ಡಾ. ದಿನೇಶ್ ಸರಳಯರವರು ಚಿಕೆತ್ಸೆ ನೀಡುತ್ತಾ ಬಂದಿದ್ದರು.


ಬಳಿಕ ಪಶುವೈದ್ಯ ಡಾ. ಗಣಪತಿ ಭಟ್ ರವರು ಚಿಕಿತ್ಸೆ ನೀಡಿದ್ದು, ಪಶುವೈದ್ಯ ಡಾ. ರವಿ ಕುಮಾರ್ ನೇತೃತ್ವದಲ್ಲಿ ಇಂದು ಏ. 18ರಂದು ಧನದ ಹೊಟ್ಟೆಯ ಭಾಗದಲ್ಲಿ ಶಸ್ತ್ರ ಚಿಕಿತ್ಸೆಯೊಂದಿಗೆ ಸುಮಾರು 4 ಬುಟ್ಟಿ ಜೀರ್ಣವಾಗದ ಆಹಾರ ಹೊರ ತೆಗೆಯುವ ಮೂಲಕ ಯಶಸ್ವಿಯಾಗಿದ್ದಾರೆ. ಸಹಾಯಕರಾಗಿ ಲಷ್ಮಿಶ, ವಿ. ಜಿ. ಎಂ. ಪೌಲೊಸ್, ಆನಂದ ಸಹಕರಿಸಿದರು.









