







ಬೆಳ್ತಂಗಡಿ: ಮರೋಡಿ ದೈವ ಶ್ರೀ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಮರೋಡಿ ಪೊಸರಡ್ಕ ಇಲ್ಲಿನ ಬ್ರಹ್ಮಕುಂಭಾಭಿಷೇಕ ಸಂಭ್ರಮವು ಎ 28ರಿಂದ ಮೇ 1ರವರೆಗೆ ನಡೆಯಲಿದ್ದು ಇದರ ಕಲಶ ಕೂಪನ್ ಬಿಡುಗಡೆಯನ್ನು ಶಾಸಕ ಹರೀಶ್ ಪೂಂಜ ಏ. 14 ರಂದು ಶಾಸಕರ ಮನೆಯಲ್ಲಿ ಬಿಡುಗಡೆ ಮಾಡಿದರು.


ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು, ಪ್ರಶಾಂತ್ ಪಾರೆಂಕಿ ಪ್ರಧಾನ ಕಾರ್ಯದರ್ಶಿ ಬಿ ಜೆ ಪಿ ಬೆಳ್ತಂಗಡಿ ಮಂಡಲ ,ಹೇಮರಾಜ್ ಕೆ,ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಸೇಸಪ್ಪ ಪೂಜಾರಿ ಉಚ್ಚುರು ,ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್,ಆಡಳಿತ ಮಂಡಳಿ ಸಮಿತಿ ಸದಸ್ಯ ನಿಖಿಲ್ ಬುಣ್ಣು, ವಿಶು ಕುಮಾರ್ ಜೈನ್ ಪಾರೊಟ್ಟು, ಉಪಸ್ಥಿತರಿದ್ದರು,









