







ನಾರಾವಿ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ನರವಿ ಸೈಂಟ್ ಆಂಟನಿ ಪದವಿ ಪೂರ್ವ ಕಾಲೇಜು, ಏಪ್ರಿಲ್ 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿ ಅಭೂತಪೂರ್ವ ಸಾಧನೆ ಮಾಡಿದೆ.



ಕಾಲೇಜಿನಿಂದ ಪರೀಕ್ಷೆಗೆ ಹಾಜರಾದ ಎಲ್ಲಾ 62 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿಶಿಷ್ಟ ಶ್ರೇಣಿ (Distinction): 23 ವಿದ್ಯಾರ್ಥಿಗಳುಪ್ರಥಮ ಶ್ರೇಣಿ (I Class): 33 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ (II Class): 06 ವಿದ್ಯಾರ್ಥಿಗಳು.
ವಿಜ್ಞಾನ ವಿಭಾಗ: ಮೇಘನಾ ಎಂ. ನಂಬಿಯಾರ್ ,ವಾಣಿಜ್ಯ ವಿಭಾಗ: ಕೆ. ಇಶಾನಿ ಕಲಾ ವಿಭಾಗ: ಕವಿತಾ ಬಿ.ವಿ.ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.









