ಎ.12: ಓಡದಕರಿಯ ಜಾತ್ರಾ ಮಹೋತ್ಸವ

0

ಲಾಯಿಲ:ದುರ್ಗಾಪರಮೇಶ್ವರಿ ದೇವಸ್ಥಾನ ಓಡದಕರಿಯ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಗೋಪಾಲಕೃಷ್ಣ ಉಪಾಧ್ಯಾಯ ಅಸ್ರಣ್ಣ ಕುತ್ರೊಟ್ಟು -ಇಂದಬೆಟ್ಟು ಹಾಗೂ ಬನ್ನಡ್ಕ ಶ್ರೀ ಇವರ ನೇತೃತ್ವದಲ್ಲಿ ಕಾಂತ್ ತಂತ್ರಿಯವರ ಪೌರೋಹಿತ್ಯದಲ್ಲಿ ಜರಗಲಿದೆ.

ಎ.11ರಂದು ನಾಗ ಸಾನಿಧ್ಯದಲ್ಲಿ ಸಂಜೆ 6:30ಕ್ಕೆ ಆಶ್ಲೇಷ ಬಲಿ ನಡೆಯಲಿದೆ. ಎ 12ರಂದು ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ, 12 ತೆಂಗಿನಕಾಯಿ ಗಣಹೋಮ, ತೋರಣ ಮಹೂರ್ತ, ಅಶ್ವತ ಪೂಜೆ, ನವಕ ಪ್ರಧಾನ ಹೋಮ ಹಾಗೂ ಕಲಶಾಭಿಷೇಕ, ಮಧ್ಯಾಹ್ನ 12:30 ಚಂಡಿಕಾ ಹೋಮ ಪೂರ್ಣಾಹುತಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮೈಸಂದಾಯ ಲೆಕ್ಕೆಸಿರಿ, ಜುಮಾದಿ ಬಂಟ ಹಾಗೂ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ಜರಗಲಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ, ಶ್ರೀ ದುರ್ಗಾ ಭಜನಾ ಮಂಡಳಿ ಕನ್ನಾಜೆ, ಚಂದ್ದೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರ ಹಳೆಪೇಟೆ, ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ.

LEAVE A REPLY

Please enter your comment!
Please enter your name here