ಏ.13-14: ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೋತ್ಸವ

0

ಬೆಳ್ತಂಗಡಿ: ಚಂದ್ರರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಜಾತ್ರೋತ್ಸವ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಏ.13ರಿಂದ 14ವರೆಗೆ ವಾರ್ಷಿಕ ಉತ್ಸವ ನಡೆಯಲಿದೆ.

ಏ.13 ಸಂಜೆ 5ಕ್ಕೆ ತಂತ್ರಿಗಳ ದೇವಸ್ಥಾನಕ್ಕೆ ಆಗಮನ, ರಾತ್ರಿ 7ಕ್ಕೆ ರಂಗಪೂಜೆ, ಭೂತ ಬಲಿ ಹಾಗೂ ದೇವರ ಉತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಏ.14ರಂದು ಬೆಳಿಗ್ಗೆ ಗಂಟೆ 8ರಿಂದ ಗಣಪತಿ ಹೋಮ, ನಿರ್ಮಾಲ್ಯ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಧ್ಯಾಹ್ನ 12-30ಕ್ಕೆ ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ,ಏ.14ರಂದು ಸಂಜೆ ಗಂಟೆ 6ರಿಂದ ತ್ರಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅಭಿವೃದ್ಧಿ ಮಂಡಲದ ಅಧ್ಯಕ್ಷ ಕೆ. ಹರೀಶ್ ಕುಮಾ‌ರ್ ಹಾಗೂ ಅನುವಂಶಿಕ ಆಡಳಿತ ಮೊಕೇಸರ ಎನ್. ಧನಂಜಯ ಅದ್ರೆ ನಡಗುತ್ತು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here