ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ:ಉಜಿರೆಯ ಡಾ|ಸುಜಾತಾಗೆ ಗೌರವ ಸನ್ಮಾನ

0

ಉಜಿರೆ: 2026 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS), ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಅನುಪಮಾ ಸೇವೆಗಾಗಿ ಉಜಿರೆಯ ಡಾ. ಸುಜಾತಾ ಕೆ.ಜೆ. ಅವರನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು .

ಡಾ. ಸುಜಾತಾ ಕೆ.ಜೆ. ಅವರು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕ್ಷೇತ್ರದಲ್ಲಿ ಶಿಕ್ಷಣತಜ್ಞೆಯಾಗಿ , ವೈದ್ಯರಾಗಿ, ಸಂಶೋಧಕರಾಗಿ ಮೂರು ದಶಕಗಳಿಗಿಂತ ಹೆಚ್ಚು ಕಾಲದ ಬೋಧನೆ ಮತ್ತು ವೈದ್ಯಕೀಯ ಅನುಭವ ಹೊಂದಿದ್ದಾರೆ.

ಯೋಗದಲ್ಲಿ ಪಿ ಎಚ್ ಡಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಅವರು, ಶಿಕ್ಷಣ, ಸಂಶೋಧನೆ ಮತ್ತು ಸಂಸ್ಥಾ ನಾಯಕರಾಗಿ ಸಮಗ್ರ ಆರೋಗ್ಯ ಸೇವೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.ಅವರು ಪ್ರಸ್ತುತ ಉಜಿರೆಯ ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಉಪ ಪ್ರಾಚಾರ್ಯಯಾಗಿ , ಡೀನ್, ಹೈಡ್ರೋಥೆರಪಿ ವಿಭಾಗದ ಪ್ರಾಧ್ಯಾ ಪಕಿ ಮತ್ತು ಮುಖ್ಯಸ್ಥೆಯಾಗಿ, ಪಿ ಜಿ ವಿಭಾಗದ ಸಂಯೋ ಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವರು ರಾಜೀವ್ ಗಾಂಧಿ ಅರೋಗ್ಯ ವಿ.ವಿ.ಬೋರ್ಡ್ ಆಫ್ ಸ್ಟಡೀಸ್ ಸದಸ್ಯೆಯಾಗಿ , ಭಾರತ ಸರ್ಕಾರದ ನ್ಯಾ ಕ್ ಸಮಿತಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.ಸಕ್ರಿಯ ಸಂಶೋಧಕರಾದ ಡಾ. ಸುಜಾತಾ ಅವರು ರಾಷ್ಟ್ರೀಯ ಮತ್ತು ಅಂ ತಾ ರಾ ಷ್ಟ್ರೀಯ ಜರ್ನಲ್ ಗಳಲ್ಲಿ 70ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ವಿಶ್ವದ ವಿವಿಧ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ , ಸಾಕ್ಷ್ಯಾ ಧಾರಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗೆ ನೀಡಿದ ಕೊಡುಗೆಗಾಗಿ ಸರ್ವತ್ರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅವರು ಪ್ರತಿಷ್ಠಿತ ಶೈಕ್ಷಣಿಕ ನಾಯಕಿ, ಪರೀಕ್ಷಕಿ, ಪಿ ಎಚ್ ಡಿ ಮಾರ್ಗದರ್ಶಕಿ ಮತ್ತು ಭಾಷಣಕಾರರಾಗಿ, ಪಠ್ಯಕ್ರಮ ಅಭಿವೃದ್ಧಿ, ಸಂಶೋಧನಾ ಮಾರ್ಗದರ್ಶನ ಮತ್ತು ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯ ಕ್ರಮಗಳಲ್ಲಿ ಶಿಬಿರಗಳು ಮತ್ತು ಸಮುದಾಯ ಕಾರ್ಯಕ್ರಮಗಳ (ಅರಿವು ಮೂಡಿಸುವ ಕಾರ್ಯ ಕ್ರಮ) ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ.

ಏ 2 ರಂದು ಬೆಂಗಳೂರಿನ ರಾಜೀವ ಗಾಂಧಿ ಅರೋಗ್ಯ ವಿ.ವಿ. ಯ ಧನ್ವಂತರಿ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಗಣ್ಯ ಅತಿಥಿಗಳಾದ ಮುಖ್ಯ ಕಾರ್ಯದರ್ಶಿ ಡಾ|ಶಾಲಿನಿ ರಜನೀಶ್, ಮೊಹಮ್ಮದ್ ಮೊಹಸಿನ್,ಡಾ|ಬಿ. ಎಲ್ ಸುಜಾತ ರಾಠೋಡ್,ಡಾ|ಪ್ರೇಮ ಧನರಾಜ್ ಮತ್ತು ಡಾ|ಭಗವಾನ್ ಬಿ.ಸಿ. ಮೊದಲಾದವರು ಡಾ|ಸುಜಾತಾ ಕೆ.ಜೆ ಅವರನ್ನು ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here