







ಮಚ್ಚಿನ : ಇತಿಹಾಸ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಬ್ರಹ್ಮ ಕಲಶವು ಏ.5 ರಂದು ಜರಗಿದ್ದು ಏ.6 ರಂದು ಧರ್ಮಸ್ಥಳದ ಹರ್ಷoದ್ರ ಕುಮಾರ್ ಭೇಟಿ ನೀಡಿ ಯಾವುದೇ ಸಭಾ ಕಾರ್ಯಕ್ರಮಗಳು ನಡೆಸದೆ ಧಾರ್ಮಿಕ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದು ಮಾದರಿ ಬ್ರಹ್ಮ ಕಲಶ ಇಲ್ಲಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ,ಡಾ. ಶಿವಪ್ರಸಾದ್ ತಂತ್ರಿ, ಬ್ರಹ್ಮ ಕಲಶ ಅಧ್ಯಕ್ಷ ವಸಂತ ಮರಕಡ, ಮಾದವ ಜೋಗಿತ್ತಾಯ,ಚಂದ್ರ ಕಾಂತ ನಿಡ್ಡಜೆ, ನ್ಯಾಯವಾದಿ ರತ್ನವರ್ಮ ಬುಣ್ಣು, ಅಶೋಕ್ ಕುಮಾರ್ ಸಿ.ಎ, ತುಳಸಿದಾಸ್ ಪೈ, ಸುಧೀರ್ ಕುಮಾರ್ ಶೆಟ್ಟಿ, ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಯತೀಶ್ ರೈ, ಹೊನ್ನಪ್ಪ ಕುಲಾಲ್, ಬೂಬ ಮೇಸ್ತ್ರಿ, ಅವಿನಾಶ್ ಕುಲಾಲ್, ಹರ್ಷನಾರಾಯಣ ಶೆಟ್ಟಿ, ಬದರಿನಾಥ್ ಸಂಪಿಗೆತ್ತಾಯ, ಮೊದಲಾದವರು ಉಪಸ್ಥಿತರಿದ್ದರು.









