







ಬೆಳ್ತಂಗಡಿ: ಉಜಿರೆ ವಿದ್ಯುತ್ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏಪ್ರಿಲ್ 07, 2026 (ಮಂಗಳವಾರ) ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಪೆಟ್ರೋನೆಟ್ ಹಾಗೂ HPCL ಸ್ಥಾವರಗಳು: 33ಕೆವಿ ಪೆಟ್ರೋನೆಟ್ ಮತ್ತು 33ಕೆವಿ HPCL ಸ್ಥಾವರಗಳಲ್ಲಿ ವಿದ್ಯುತ್ ಇರುವುದಿಲ್ಲ.ಪಿಲಿಕಳ ಫೀಡರ್: ತೋಟತ್ತಾಡಿ, ಚಾರ್ಮಾಡಿ, ನೆರಿಯ ಪ್ರದೇಶಗಳು.ಚಾರ್ಮಾಡಿ ಫೀಡರ್: ಚಾರ್ಮಾಡಿ, ಕದಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳು.ಮುಂಡಾಜೆ ಫೀಡರ್: ಮುಂಡಾಜೆ ಮತ್ತು ಕಲ್ಯಾಣಿ ಪರಿಸರ.ದಿಡುಪೆ ಫೀಡರ್: ದಿಡುಪೆ ಮತ್ತು ಕೊಲ್ಲಿ ಪ್ರದೇಶಗಳು.ಗುರುವಾಯನಕೆರೆ ಮತ್ತು ಕಕ್ಕಿಂಜೆ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸ ನಡೆಯಲಿರುವುದರಿಂದ ಈ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಮೆಸ್ಕಾಂ ಉಜಿರೆ ಉಪವಿಭಾಗ ಇವರು ವಿನಂತಿಸಿದ್ದಾರೆ.









