ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸಭೆ; ಜಿಲ್ಲಾ ಆರೋಗ್ಯಾಧಿಕಾರಿಗಳು,ವೆನ್ಲಾಕ್,ಲೇಡಿಗೋಷನ್ ಅಧಿಕಾರಿಗಳು ಮತ್ತು ರಕ್ಷಾ ಸಮಿತಿ ಸದಸ್ಯರು ಭಾಗಿ

0

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಜಾಸೌಧದ ಸಭಾಂಗಣದಲ್ಲಿ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆ ಎ.1 ರಂದು ನಡೆಯಿತು.

ರಕ್ಷಾ ಸಮಿತಿಯ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆ ಆಸ್ಪತ್ರೆಯ ಅಭಿವೃದ್ಧಿಯ ಮತ್ತು ಕುಂದುಕೊರತೆಗಳ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು ಹಾಗೂ ಬಡ ರೋಗಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾದಿಕಾರಿ ಡಾ ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ ಎಸ್, ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ವೆನ್ಲಾಕ್ ಆರ್ ಎಮ್ ಓ ಡಾ.ಸುಧಾಕರ್, ಲೇಡಿಗೋಷನ್ ಆರ್ ಎಮ್ ಓ ಡಾ.ಜಗದೀಶ್ ರಕ್ಷಾ ಸಮಿತಿಯ ಸದಸ್ಯರಾದ ಪದ್ಮನಾಭ ಅಮೀನ್,ಅನಿಲ್ ರಸ್ಕಿನ್ಹಾ, ಶಶಿಧರ ಜೆ, ಅಬ್ದುಲ್ ಸಲೀಮ್, ಪ್ರಮೀಳಾ ಹಾಗೂ ದಾಮೋದರ ಪುತ್ತೂರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here