









ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತಿಮ ಪದವಿ ವಿಭಾಗದ[ NEP] ಬಿ.ಕಾಂ ನ ಐದನೇ ಚತುರ್ಮಾಸದಲ್ಲಿ ಉತ್ತಮವಾದ ಫಲಿತಾಂಶ ದಾಖಲಾಗಿದ್ದು, ಐದನೇ ಚತುರ್ಮಾಸದಲ್ಲಿ ವಿದ್ಯಾರ್ಥಿನಿ ಸಫಾ ತಸ್ಮಿಯ 93.70% ಪಡೆದು ಪ್ರಥಮ ಸ್ಥಾನ, ಸುಪ್ರಿಯಾ 93.20% ಫಲಿತಾಂಶವನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ವಿದ್ಯಾರ್ಥಿನಿ ಫಾತಿಮಾ 93.1% ಫಲಿತಾಂಶವನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಚಾರ. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಂಯೋಜಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ .









