ಸೈಲೆಂಟ್ ದಿ ಸೈಲೆಂಟ್ ಸ್ಟಾರ್’ ಪುರಸ್ಕಾರ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಅವರಿಗೆ ಸನ್ಮಾನ

0

ಕೌಕ್ರಾಡಿ; ಸುದೀರ್ಘ ಕಾಲದಿಂದ ಕೌಕ್ರಾಡಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಹಾಗೂ ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಎಲ್ಲರಿಗೂ ಪ್ರೇರಣೆ ನೀಡಿದ ವಿಶಾಲಾಕ್ಷಿ ಅವರಿಗೆ ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಯೋಜನೆಯಡಿ ಗುರುತಿಸಿ ಸನ್ಮಾನಿಸಲಾಯಿತು.

ಸಭೆಗೆ ಧನುಷ್ ಕುಮಾರ್ ಜೈನ್ ಅವರು ಸನ್ಮಾನಿತರನ್ನು ಪರಿಚಯಿಸಿದರು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದೀಪಾ ವಿ. ಅವರು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿತೇಶ್ ಎಂ ಸ್ಟ್ರೆಲ್ಲಾ ಅವರು ವಹಿಸಿದರು. ವಲಯ ಉಪಾಧ್ಯಕ್ಷರಾದ ಕಾಶೀನಾಥ್ ಗೋಗಟೆ, ನಿಕಟಪೂರ್ವ ಅಧ್ಯಕ್ಷರಾದ ಡಾ. ಶೋಭಾ ಪಿ‌., ಲೇಡಿ ಜೆಸಿ ಅಧ್ಯಕ್ಷರಾದ ರೇಶ್ಮಿ ಡಿಸೋಜ, ಕೆ. ಶ್ರೀಧರ ರಾವ್, ಸಂತೋಷ್ ಜೈನ್, ಜೆಸಿಂತಾ ಡಿಸೋಜ, ಜೋಸೆಫ್ ಪಿರೇರಾ, ವಿಕ್ಟರ್ ಸುವಾರಿಸ್, ಚಂದನಾ ಜೈನ್ ಹಾಗೂ ದಕ್ಷಾ ಜೈನ್ ಅವರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ಅವರು ವಂದಿಸಿದರು.

LEAVE A REPLY

Please enter your comment!
Please enter your name here