ಮಾ.27 : ಮಣ್ಣಿನ ಹರಕೆ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ; ಮಾ. 28 – ಏ.1ರವರೆಗೆ ವರ್ಷಾವಧಿ ಜಾತ್ರೆ

0

ನಡ : ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವರ ಸನ್ನಿಧಿಯಲ್ಲಿಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರೆಯು ಮಾ. 27ರಿಂದ ಏ. 1ರವರೆಗೆ ನಡೆಯಲಿದೆ. ಭಕ್ತಾದಿಗಳೆಲ್ಲರೂ ತ್ರಿಕರಣಪೂರ್ವಕವಾಗಿ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಸತೀಶ್ ಚಂದ್ರ ಸೂರ್ಯಗುತ್ತು ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳು ಮಾ. 27ನೇ ಶುಕ್ರವಾರಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಪೂರ್ವಾಹ್ನ ಗಂಟೆ 7.30ರಿಂದ ಪುಣ್ಯಾಹ,ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 8ರಿಂದರಂಗಪೂಜೆ, ಉತ್ಸವ, ಮಾ. 28ನೇ ಶನಿವಾರಪೂರ್ವಾಹ್ನ ಗಂಟೆ 9-15ರಿಂದಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ. ಮಾ.29ನೇ ಆದಿತ್ಯವಾರ.ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆಸಂಜೆ ಗಂಟೆ 6ರಿಂದಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ಹೊರಡುವುದು.ರಾತ್ರಿ ಗಂಟೆ 8.00ರಿಂದಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ, ಮಾ.30ನೇ ಸೋಮವಾರಪೂರ್ವಾಹ್ನ ಗಂಟೆ 7.00ರಿಂದಸೊಡರಬಲಿ ಉತ್ಸವಮಧ್ಯಾಹ್ನ 12.30ರಿಂದ ಮಹಾಪೂಜೆ, ಅನ್ನಸಂತರ್ಪಣೆದಿ| ಎಚ್. ಲಾಲ್ ಚಂದ್ರ ಹೆಗ್ಡೆ, ದಿ. ರಾಜಾವತಿ ಅಮ್ಮ, ದಿ. ಭಾರತಿ ಆರ್. ಅವರ ಸ್ಮರಣಾರ್ಥ, ಸೂರ್ಯ ಬಿ. ರಾಜಶೇಖರ, ಮಕ್ಕಳು ಮತ್ತು ಮೊಮ್ಮಕ್ಕಳು ಮತ್ತು ಕುಟುಂಬ ಇವರಿಂದ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂಟೆ 8ರಿಂದಉತ್ಸವ ಹೊರಟು ಕೆರೆಕಟ್ಟೆ ಪೂಜೆ, ಮಹಾಪೂಜೆಮಾ. 31ನೇ ಮಂಗಳವಾರ ಪೂರ್ವಾಹ್ನ ಗಂಟೆ 8.45ರಿಂದ ದರ್ಶನಬಲಿ ಉತ್ಸವ, ಮಧ್ಯಾಹ್ನ ಗಂಟೆ 12.30ರಿಂದಮಹಾಪೂಜೆ, ಮಧ್ಯಾಹ್ನ ಗಂಟೆ 1ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8ರಿಂದ ಉತ್ಸವ, ಪುಷ್ಪ ರಥೋತ್ಸವ, ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವ, ಏ. 1ನೇ ಬುಧವಾರ ಪೂರ್ವಾಹ್ನ ಗಂಟೆ 9ರಿಂದ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಯಾತ್ರ ಹೋಮ, ಅವಭ್ರ ತ ಸ್ನಾನಕ್ಕೆ ಹೊರಡುವುದು.ರಾತ್ರಿ ಗಂಟೆ 10.30ಕ್ಕೆ ಧ್ವಜಾವರೋಹಣರಾತ್ರಿ 11ರಿಂದ ದೈವಗಳ ನೇಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು; ಮಾ.29ನೇ ಆದಿತ್ಯವಾರರಾತ್ರಿ ಗಂಟೆ 9.30ರಿಂದ ಕುಸಲ್ದರಸೆ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು ಅಭಿನಯಿಸಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ*”ಪುದರ್ ದೀತಿಜಿ!”, ಮಾ. 30ನೇ ಸೋಮವಾರ ರಾತ್ರಿ ಗಂಟೆ 9.30ರಿಂದ “ಅಭಿನಯ ಕಲಾವಿದರು” ಉಡುಪಿ ಇವರಿಂದ ವಿಕ್ರಮ್ ಮಂಚಿ ರಚಿಸಿರುವ ಅಭಿನಯ ರತ್ನ ದಿನೇಶ್ ಅತ್ತಾವರ ನಿರ್ದೇಶಿಸಿರುವ ಕುತೂಹಲಭರಿತ ಹಾಸ್ಯಮಯ ನಾಟಕ”ಶಾಂಭವಿ”ಮಾ.31ರಾತ್ರಿ ಗಂಟೆ 11.00ರಿಂದ “ಸಂಗಮ ಕಲಾವಿದರು” ಉಜಿರೆ ಇವರಿಂದ ರಾಜೇಶ್ ಆಚಾರ್ಯ ಸವಣಾಲು ರಚಿಸಿ, ಗಿರೀಶ್ ಹೊಳ್ಳ ನಿರ್ದೇಶಿಸಿರುವ ತುಳು ಸಾಂಸಾರಿಕ ಹಾಸ್ಯಮಯ ನಾಟಕ”ಮಾಸ್ಟ್ರು ಮನಿಪುಜೆರ್” ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here