






ವೇಣೂರು :ಶ್ರೀ ವಿಶ್ವಕರ್ಮ ಸೇವಾ ಸಂಘ( ರಿ ) ವೇಣೂರು ಇದರ 34ನೇ ವರ್ಷದ ಮಹಾಸಭೆ ಹಾಗೂ ಶ್ರೀ ವಿಶ್ವಕರ್ಮ ಪೂಜೆಯು ಮಾ.22ರಂದು ಸಂಘದಲ್ಲಿ ಜರಗಿತು. ಇದರ ಅಂಗವಾಗಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಹಂಸ ವುಡ್ ಇಂಡಸ್ಟ್ರೀಸ್ ಮಾಲಕ ಬಿ. ಕೆ.ಸತೀಶ್ ಆಚಾರ್ಯರು ಅಧ್ಯಕ್ಷತೆಯನ್ನು ವಹಿಸಿಕೊಂಡು ಸಮಾಜ ಬಾಂಧವರಿಗೆ ಹಲವಾರು ವಿಚಾರಗಳ ಮಾಹಿತಿಯನ್ನು ನೀಡುವುದರ ಜೊತೆಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ (ಲಿ) ಕೊಟ್ಟಾರ ಚೌಕಿ ಮಂಗಳೂರು ಇದರ ನಿರ್ದೇಶಕ ಮಂಜುನಾಥ ಆಚಾರ್ಯ ಅಳದಂಗಡಿ , ಕಾಳಿಕಾ ಡಿಜಿಟಲ್ ಪ್ರಿಂಟ್ಸ್ ಮೂಡಬಿದಿರೆ ಇದರ ಮಾಲಕಿ ಶಾಂತಲಾ ಸೀತಾರಾಮ ಅಚಾರ್ಯ, ಬ್ರಹ್ಮಶ್ರೀ ಶ್ರೀ ಎನ್ ಕೇಶವ ಪುರೋಹಿತ್ ಮೂಡಬಿದಿರೆ ಇವರೆಲ್ಲರೂ ಸಂದರ್ಭೋಚಿತವಾಗಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಶ್ರೀಧರ ಅಚಾರ್ಯ ಖಂಡಿಗ,ಅಧ್ಯಕ್ಷ ಸತೀಶ ಆಚಾರ್ಯ ಕೈರೋಳಿ, ಶ್ರೀ ಕಾಳಿಕಾಂಬ ಮಹಿಳಾ ಮಂಡಳಿ ಅಧ್ಯಕ್ಷೆ ಮಾಲತಿ ರತ್ನಾಕರ ಇವರು ವೇದಿಕೆ ಉಪಸ್ಥಿತರಿದ್ದರು. ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಸುಧಾಕರ್ ಆಚಾರ್ಯರು ಲೆಕ್ಕಪತ್ರ ಮಂಡಿಸಿ, ಸತೀಶ್ ಆಚಾರ್ಯ ಧನ್ಯವಾದವಿತ್ತರು. ಬಿ ಹರಿಶ್ಚಂದ್ರ ಆಚಾರ್ಯ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.









