






ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ರಿಲಿಜಿಯಸ್ ಟ್ರಸ್ಟಿ, ಉದ್ಯಮಿ ಶ್ರೀ ಗಣೇಶ್ ಪೈಂಟಿಂಗ್ ಮತ್ತು ಫ್ಲೋರಿಂಗ್ ಮಾಲಕ ಎಂ. ರವೀಂದ್ರ ಪೂಜಾರಿ ಆರ್ಲ ಇವರು ಶ್ರೀ ರಾಮ ಕ್ಷೇತ್ರದ ಪ್ರತಿಷ್ಠಾಪ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ 6 ಛತ್ರ ಛಾಮರವನ್ನು ಸಮರ್ಪಣೆ ಮಾಡಿದರು.
ವೀಣಾ ರವೀಂದ್ರ ಎಂ. ಪೂಜಾರಿ ಆರ್ಲ, ರಕ್ಷಿತಾ ಸುವರ್ಣ, ಸಂದೇಶ ಕುಮಾರ್, ಸಾದ್ವಿನ್ ಎಸ್.ಕೆ., ಸ್ವಾಸ್ವಾನ್ ಎಸ್.ಕೆ., ಡಾ| ರಂಜಿತಾ ಸುವರ್ಣ, ರಂಜಿತ್, ಸ್ನಿಗ್ಧ ಲಕ್ಷ್ಮೀ, ಸ್ಟೈರ್ಯನ್ ಸ್ಕಂದ ಇವರು ಜೊತೆಗಿದ್ದರು.


ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ರವೀಂದ್ರ ಪೂಜಾರಿ ಆರ್ಲ ಹಾಗೂ ಕುಟುಂಬಿಕರ ಸೇವೆಯನ್ನು ಗೌರವಿಸಿದರು.
ನಿವೃತ್ತ ಎಸ್. ಪಿ. ಕ್ಷೇತ್ರದ ರಿಲೀಜಿಯಸ್ ಟ್ರಷ್ಟಿ ಪೀತಾಂಬರ ಹೇರಾಜೆ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಗುರುದೇವ ಮಠ ಟ್ರಷ್ಟಿ ಕಾರ್ಯದರ್ಶಿ ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ, ಇಂಜಿನಿಯರ್ ರಾಹುಲ್ ಮೊದಲದವರು ಉಪಸ್ಥಿತರಿದ್ದರು.









