






ಪದ್ಮುಂಜ: ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರು ಕೊಡ ಮಾಡಿದ ಸ್ಮಾರ್ಟ್ ಕ್ಲಾಸ್ ಹಾಗೂ ಸಿ ಎ ಬ್ಯಾಂಕಿನಿಂದ ಕೊಡಮಾಡಿದ ಕಂಪ್ಯೂಟರನ್ನು ಉದ್ಘಾಟನೆ ಕಾರ್ಯಕ್ರಮ ಎಸ್ ಡಿ ಎಂ ಅಧ್ಯಕ್ಷ ಪುರುಷೋತ್ತಮ ಗೌಡ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿ ಪಂ ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್ ಹೆಗ್ಡೆ ಕಣೆಯೂರು ಇವರು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದರು.

ಪದ್ಮುಂಜ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ ಇವರು ಕಂಪ್ಯೂಟರ್ ಉದ್ಘಾಟನೆ ನೆರವೇರಿಸಿದರು.ಮುಖ್ಯ ಶಿಕ್ಷಕ ಬೀರಾದರ್ ಸಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮುಂಜ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಶಾರದ ಆರ್ ರೈ.ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶಿಲ್ಪ, ರಾಜೀವ ರೈ ಮುಗೆರೋಡಿ, ದಾನಿಗಳಾದ ಸದಾಶಿವ ಜೋಗಿ ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸ್ಮಾರ್ಟ್ ಟಿವಿ ಯ ಕಿಶೋರ್ ಎಸ್ ಡಿ ಎಂ ಸದಸ್ಯರು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಏಳನೇ ತರಗತಿಯಿಂದ ಬೀಳ್ಕೊಂಡವರ ಹಾಗೂ ದಾನಿ ಸದಾಶಿವ ಜೋಗಿಯವರ ಸಹಕಾದಿಂದ ಶಾಲೆಗೆ ಕೊಡಮಾಡಿದ ಸೌಂಡ್ಸ್ ಸಿಸ್ಟಮನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರ ಮಾಡಲಾಯಿತು.


ಕಂಪ್ಯೂಟರ್ ಉದ್ಘಾಟನೆ ಮಾಡಿ ಮಾತನಾಡಿದ ರಕ್ಷಿತ್ ಪಣೆಕ್ಕರ್ ನಮ್ಮ ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕಂಪ್ಯೂಟರನ್ನು ಒದಗಿಸಿದ್ದೇವೆ ಮುಂದಿನ ದಿನಗಳಲ್ಲಿ ಈ ಶಾಲೆಯ ಮುಖ್ಯ ಬೇಡಿಕೆಯಾದ ಹೈಟೆಕ್ ಶೌಚಾಲಯವನ್ನು ಶಾಸಕರ ಮುಖಾಂತರ ನೇರವೇರಿಸಿ ಕೊಡಲು ಪ್ರಯತ್ನಿಸುತ್ತೇನೆ ಎಂದರು.

ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜಶ್ರೀ ಎಸ್ ಹೆಗ್ಡೆ ಇವರು ಮಾತನಾಡಿ ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಯಾವುದೇ ಸವಲತ್ತುಗಳು ವ್ಯವಸ್ಥೆಗಳು ಇರಲಿಲ್ಲ ಈಗ ಸರಕಾರ ಬಹಳಷ್ಟು ಸವಲತ್ತುಗಳನ್ನು ನೀಡುತ್ತಿದೆ ಇದೀಗ ರಾಜ್ಯ ಸಭಾ ಸದಸ್ಯರಾದ ವೀರೇಂದ್ರ ಹೆಗ್ಗಡೆಯವರು ಕೊಡಮಾಡಿದ ಸ್ಮಾರ್ಟ್ ಕ್ಲಾಸ್ ನ್ನು ಉದ್ಘಾಟನೆ ನಡೆಸಲು ಅವಕಾಶ ನೀಡಿದ್ದಕ್ಕೆ ನಾನು ಬಹಳ ಸಂತುಷ್ಟಲಾಗಿದ್ದೇನೆ ಎಂದರು.
ಈಗಿನ ಅಂತರ್ಜಾಲ ಯುಗದಲ್ಲಿ ಒಳ್ಳೆಯದು ಕೆಟ್ಟದ್ದೂ ಎರಡೂ ಇದೆ ನಾವು ಒಳ್ಳೆಯದನ್ನು ಮಾತ್ರ ಉಪಯೋಗಿಸಿಕೊಂಡು ಉತ್ತಮ ಪ್ರಜೆಗಳಾಗೋಣ ಎಂದರು. ಪದ್ಮುಂಜ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶಾರದಾ ಆರ್ ರೈ ಇವರು ಮಾತನಾಡಿ ಹಿಂದಿನ ಕಾಲದಲ್ಲಿ ಅಧ್ಯಾಪಕರ ಕೊರತೆಯಿತ್ತು ನೂರು ಇರುನೂರು ವಿದ್ಯಾರ್ಥಿಗಳಿದ್ದರೆ ಓರ್ವ ಅಧ್ಯಾಪಕರಾಗಿದ್ದರು. ಈಗಿನ ರೀತಿ ಯಾವುದೇ ಮೂಲಭೂತ ಸೌಕರ್ಯಗಲಿರಳಿಲ್ಲ .ಆ ದಿನಗಳಲ್ಲಿ ಅಧ್ಯಾಪಕರು ಹೊಡೆದು ಬಡಿದು ಪಾಠ ಮಾಡುತ್ತಿದ್ದರು.ಅವರು ಅಂದು ಮಾಡಿದ ಪಾಠ ಇಂದೂ ನಮ್ಮ ಮನಸ್ಸಿಂದ ಮಾಸಿಲ್ಲ ಎಂದರು.
ಪಂಚಾಯತಿ ಮಾಜಿ ಅಧ್ಯಕ್ಷ ಸೀತಾರಾಮ ಮಡಿವಾಳ ರವರು ಮಾತನಾಡಿ ಶುಭ ಹಾರೈಸಿದರು. ಅಧ್ಯಕ್ಷರ ಭಾಷಣ ಮಾಡಿದ ಪುರುಷೋತ್ತಮ ಗೌಡ ಇವರು ನಮ್ಮ ಶಾಲೆಯ ಅಭಿವೃದ್ಧಿಗೆ ಸಹಕರಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಶಿಕ್ಷಕ ನಾರಾಯಣ ಗೌಡ ಸ್ವಾಗತಿಸಿದರು.ಶಿಕ್ಷಕ ಪ್ರೇಮನಾಥ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕೀರ್ತಿ ಮೇಡಂ ಧನ್ಯವಾದ ಸಲ್ಲಿಸಿದರು.









