ಆಳ್ವಾಸ್‌ ವಿರಾಸತ್ ನುಡಿಸಿರಿ ಸಾಂಸ್ಕೃತಿಕ ವೈಭವ ಮರುಪ್ರಸಾರ ಇಂದು ಸಂಜೆ 6ಕ್ಕೆ ಸುದ್ದಿ ನ್ಯೂಸ್ ಚಾನೆಲ್‌ ನಲ್ಲಿ

0

ಉಜಿರೆ: ಆಳ್ವಾಸ್‌ ನುಡಿಸಿರಿ ವಿರಾಸತ್‌ ಬೆಳ್ತಂಗಡಿ ಘಟಕದಿಂದ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ಮಾ.22ರಂದು ಅದ್ದೂರಿಯ ಸಾಂಸ್ಕೃತಿಕ ವೈಭವ ನೆರವೇರಿತ್ತು.

500ವಿದ್ಯಾರ್ಥಿ ಕಲಾವಿದರು ನೀಡಿದ ನೃತ್ಯಗಳು, ಮಲ್ಲಗಂಬ, ರೋಪ್‌ ನೃತ್ಯಗಳು ನೋಡುಗರ ಮೈ ಜುಮ್ಮೆನ್ನುವಂತಿತ್ತು. ಬಡಗತಿಟ್ಟು ತೆಂಕತಿಟ್ಟುವಿನ ಯಕ್ಷಗಾನವಂತೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ನೃತ್ಯ, ಕಸರತ್ತು, ಯೋಗ ಸೇರಿದಂತೆ ಒಟ್ಟು 12 ರೀತಿಯ ಸಾಂಸ್ಕೃತಿಕ ವೈಭವಗಳಲ್ಲಿ ಕೊನೆಯ ಬೊಂಬೆ ವಿನೋದಾವಳಿಯಂತೂ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತ್ತು.

ಈ ಕಾರ್ಯಕ್ರಮದ ಪೂರ್ಣ ದೃಶ್ಯಾವಳಿಯನ್ನು ಸುದ್ದಿ ನ್ಯೂಸ್‌ ಚಾನೆಲ್‌ನಲ್ಲಿ ಮಾ.23ರ ಸಂಜೆ ಮರುಪ್ರಸಾರ ಮಾಡಲಾಗುವುದು. ಪ್ರತಿಯೊಬ್ಬರೂ ತಪ್ಪದೆ ಈ ಕಾರ್ಯಕ್ರಮ ನೋಡಿ.

LEAVE A REPLY

Please enter your comment!
Please enter your name here