







ಅಳದಂಗಡಿ: ಹಾಲು ಉತ್ಪಾದಕರ ಸಹಕಾರ ಸಂಘ ಅಳದಂಗಡಿ ಇವರ 50 ನೇ ವರ್ಷ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಫಾದರ್ ಎಲ್. ಎಮ್ ಪಿಂಟೊ ಆಸ್ಪತ್ರೆ, ಬದ್ಯಾರ್,ಹಾಲು ಉತ್ಪಾದಕರ ಸಹಕಾರ ಸಂಘ ಅಳದಂಗಡಿ ಹಾಗೂ ಗ್ರಾಮ ಪಂಚಾಯತ್ ಅಳದಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ ಹಾಗೂ ಉಚಿತ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರವು ಮಾ.22 ರಂದು ಅಳದಂಗಡಿ ಪಂಚಾಯತ್ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ರೋಷನ್ ಕ್ರಾಸ್ತಾ ಧರ್ಮಗುರುಗಳು ಮತ್ತು ಆಡಳಿತಾಧಿಕಾರಿಗಳು ಫಾದರ್ ಎಲ್.ಎಂ. ಪಿಂಟೊ ಆಸ್ಪತ್ರೆ ಬದ್ಯಾರ್. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಡಾ| ಎನ್.ಎಂ. ತುಳುಪುಳೆ ಶ್ರೀ ಕ್ಲಿನಿಕ್, ಅಳದಂಗಡಿ.ಇವರು ವಹಿಸಿದ್ದರು.


ವೇದಿಕೆಯಲ್ಲಿ ಎಲಿಯಾಸ್ ಡಿಸೋಜಾ ಧರ್ಮಗುರುಗಳು, ಅಳದಂಗಡಿ ಚರ್ಚ್. ಪೂವಪ್ಪ ಮಲೆಕುಡಿಯ ಎಸ್.ಡಿ.ಎ. ಗ್ರಾಮ ಪಂಚಾಯತ್ ಅಳದಂಗಡಿ, ಮೊಬ್ಬಸುದ್ದಿನ್ ಸದಸ್ಯರು, ಆರೋಗ್ಯ ರಕ್ಷಾ ಸಮಿತಿ, ಅಳದಂಗಡಿ, ಕೆ. ಪ್ರಶಾಂತ್ ವೇಗಸ್ ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ ಅಳದಂಗಡಿ, ಅಶೋಕ್ ಸುವರ್ಣ ಉಪಾಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ ಅಳದಂಗಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳು ಹಾಗೂ ಸಿಬ್ಬಂದಿವರ್ಗ, ಊರವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಬದ್ಯಾರು ಆಸ್ಪತ್ರೆಯ ಸಿಬ್ಬಂದಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಕೆ. ಪ್ರಶಾಂತ್ ವೇಗಸ್ ಸ್ವಾಗತಿಸಿ, ವಿಲ್ಪ್ರೆಡ್ ಫೆರ್ನಾಂಡೀಸ್ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಕಾಶ್ ಶೆಣೈ ಔಷಧ ವಿಭಾಗ, ಡಾ. ವಿಲ್ಟರ್ ಕುಟಿನ್ಹೋ ಮೂಳೆ ಶಸ್ತ್ರಚಿಕಿತ್ಸಕರು. ಡಾ. ಜೆಸ್ಸಿ ಮರಿಯಾ ಡಿಸೋಜಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಡಾ.ಬಾಲಕೃಷ್ಣ ಮಕ್ಕಳ ತಜ್ಞರು, ಡಾ.ನಾಗಭೂಷಣ್ ಹೆಗ್ಡೆ ಚರ್ಮರೋಗ ತಜ್ಞರು. ಡಾ ಎಲ್ ರೊಯ್ ಸಲ್ಡಾನಾ ಖ್ಯಾತ ಶಸ್ತ್ರಚಿಕಿತ್ಸಾ ಹಾಗೂ ಕ್ಯಾನ್ಸರ್ ಚಿಕಿತ್ಸಾ ತಜ್ಞರು ಆರೋಗ್ಯ ತಪಾಸಣೆಯನ್ನು ನಡೆಸಿದರು.









