







ಬೆಳ್ತಂಗಡಿ: ಲಯನ್ಸ್ ಸೇವಾ ಕೇಂದ್ರ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ನಿರ್ಮಿಸಲಾದ ಲಯನ್ಸ್ ಕ್ಲಬ್‌ನ ಲಯನ್ಸ್ ಸೇವಾ ಭವನ ಉದ್ಘಾಟನಾ ಸಮಾರಂಭ ಮಾ. 22ರಂದು ನಡೆಯಿತು.
ಮಿನಿವಿಧಾನ ಸೌಧ ಮುಂಭಾಗದ ಕ್ಯಾಂಪ್ಕೋ ರಸ್ತೆಯಲ್ಲಿ ನೂತನ ಲಯನ್ಸ್ ಕ್ಲಬ್ ನಿರ್ಮಾಣವಾಗಿದ್ದು, ಉದ್ಘಾಟನಾ ಸಮಾರಂಭವನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡ ಉದ್ಘಾಟಿಸಿದರು, ಭೋಜನ ಗೃಹದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜಾ ನೆರವೇರಿಸಿದರು.


ಲಯನ್ಸ್ ಕಚೇರಿ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ ಶೆಣೈ ಮಾಡಿದರು, ಸಭಾಧ್ಯಕ್ಷತೆಯನ್ನು ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಬೆಂಗಳೂರಿನ ಸುಜನ ಗ್ರೂಪ್ ಆಫ್ ಇನ್ಸಿಟ್ಯೂಷನ್ ನ ಲೋಕೇಶ್ ಆರ್., ಹೈಕೋರ್ಟ್ ನ್ಯಾಯವಾದಿ ಪ್ರಶಾಂತ್ ಬಿ.ಕೆ, ಲಯನ್ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ಲಯನ್ ಗೋವರ್ಧನ ಕೆ. ಶೆಟ್ಟಿ, ಲಯನ್ಸ್ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಲಯನ್ ರಾಜು ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಪ್ತಿ ವಿ ಶೆಟ್ಟಿ ಪ್ರಾರ್ಥನೆ ಮಾಡಿದರು, ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಮುರಳಿ ಬಲಿಪ ಸ್ವಾಗತಿಸಿ, ಲಯನ್ಸ್ ಪೂರ್ವ ಪ್ರಾಂತ್ಯಾಧ್ಯಕ್ಷರಾದ ಲಯನ್ ಧರಣೇಂದ್ರ ಜೈನ್ ಹಾಗೂ ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು.









