






ಉಜಿರೆ: ಬೆನ್ನುಹುರಿ ಅಪಘಾತಕ್ಕೊಳಗಾದ ಕುಶಾಲನಗರದ ಪ್ರಮೀಳಾ ಸತ್ಯ ಹಾಗೂ ಕುಟುಂಬಸ್ಥರು ಸೌತಡ್ಕ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ” ಸೇವಾಧಾಮಕ್ಕೆ ” ರೂ. 40,000/- ವೆಚ್ಚದ ಗಾಲಿಕುರ್ಚಿಯನ್ನು ಕೊಡುಗೆಯಾಗಿ ನೀಡಿದ್ದಾರೆ.



ಸೇವಾಭಾರತಿಯ ಉಪಾಧ್ಯಕ್ಷ ಬಾಲಕೃಷ್ಣ ಹಾಗೂ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಕ್ಷೇತ್ರ ಸಂಯೋಜಕ ಕುಸುಮಾಧರ್ ಅವರು ಗಾಲಿಕುರ್ಚಿಯನ್ನು ಸ್ವೀಕರಿಸಿ “ಸೇವಾಧಾಮ” ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.









