ಲಯನ್ಸ್ ಸೇವಾ ಭವನ ಕಟ್ಟಡಕ್ಕೆ ಧರ್ಮಸ್ಥಳದಿಂದ ದೇಣಿಗೆಯ ಎರಡನೇ ಕಂತು ಹಸ್ತಾಂತರ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2025-26ನೇ ಸಾಲಿನ ಗ್ರಾಮ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಲಯನ್ಸ್ ಸೇವಾ ಭವನ ನಿರ್ಮಾಣಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನೀಡಿದ ಸಹಾಯಧನವನ್ನು ಮಾ.16 ರಂದು ಶ್ರೀ ಕ್ಷೇ.ಗ್ರಾ.ಯೋ. ಯೋಜನಾಧಿಕಾರಿ ಯಶೋಧ‌ರ್ ರವರು ಎರಡನೇ ಕಂತು ರೂ.3 ಲಕ್ಷದ ಮಂಜೂರಾತಿ ಪತ್ರವನ್ನು ನೀಡಿದರು.

ಶ್ರೀ ಕ್ಷೇತ್ರದಿಂದ ಈಗಾಗಲೇಮೊದಲ ಕಂತು ರೂ.5ಲಕ್ಷ ಸೇರಿ ಒಟ್ಟು ರೂ.8 ಲಕ್ಷ ನೀಡಿದಂತಾಯಿತು. ಕಟ್ಟಡ ಸಮಿತಿಯ ಅಧ್ಯಕ್ಷ ರಾಜು ಶೆಟ್ಟಿ, ಲಯನ್ಸ್ ಸೇವಾ ಕೇಂದ್ರ ಟ್ರಸ್ಟಿನ ಅಧ್ಯಕ್ಷ ಜಯಂತ್ ಶೆಟ್ಟಿ ಕುಂಟಿನಿ, ಕ್ಲಬ್ಬಿನ ಅಧ್ಯಕ್ಷ ಮುರಳಿ ಬಲಿಪ, ಮಾಜಿ ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ, ಮಾಜಿ ಅಧ್ಯಕ್ಷ ಅಶೋಕ್‌ ಕುಮಾ‌ರ್ ಬಿಪಿ, ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ ಕೆ, ಸಂಚಾಲಕ ರಘುರಾಮ್ ಶೆಟ್ಟಿ ಸಾಧನಾ, ಸದಸ್ಯರಾದ ತಂಗಚ್ಚನ್‌ ಧರ್ಮಸ್ಥಳ, ನಾಣ್ಯಪ್ಪ ನಾಯ್ಕ ಉಜಿರೆ, ತುಕಾರಾಮ್ ಬಿ, ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಮೇಲ್ವಿಚಾರಕ ರವಿ, ಸೇವಾ ಪ್ರತಿನಿಧಿ ಜ್ಯೋತಿ, ಬೆಳ್ತಂಗಡಿ ಒಕ್ಕೂಟದ ಅಧ್ಯಕ್ಷರಾದ ಚರಣ್ ಹಾಗೂ ದಯಾನಂದ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here