







ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ 33ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಮಾ. 21ರಂದು ನಡೆಯಲಿದೆ. ದಿ ವಸಂತ ಬಂಗೇರ ಗೌರವಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿತ್ತು. ಸುದೀರ್ಘ ಹೋರಾಟ ಮಾಡಿ ಕಂಬಳ ಉಳಿಸಿದ್ದಾರೆ. ಈಗ ನಾನು ಗೌರವಧ್ಯಕ್ಷನಾಗಿದ್ದೇನೆ. ಜಿಲ್ಲೆಯ ಪುರಾತನ ವೇಣೂರು ಪೆರ್ಮುಡ ಕಂಬಳ. ಕಂಬಳವು ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು ಇಲ್ಲಿ ಉತ್ತಮ ನೀರಿನಶ್ರಯ ವಿದ್ದು, ನೆರಳಿನಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿ ಕೈಯಿಂದಲೆ ಕರೆ ನಿರ್ಮಿಸಲಾಗಿದ್ದು, ಕಳೆದ ಭಾರಿಯಂತೆ ದೋಣಿ ವಿಹಾರ, ಇಬ್ಬರು ದೋಣಿಯಲ್ಲಿ ಕಾಯರ್ಕಿಂಗ್, ಬ್ಲಾಯಿಡಿಂಗ್ ವ್ಯವಸ್ಥೆ, ವಾಟರ್ ಬ್ಲಾಯಿಡಿಂಗ್, ಸಂಚಾಲಕ ಪ್ರವೀಣ್ ಫೆರ್ನಾಂಡಿಸ್ ನೇತೃತ್ವದಲ್ಲಿ ಹಳೇ ಸಾಮಗ್ರಿಗಳ ಪ್ರದರ್ಶನವು ನಡೆಯಲಿದೆ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾ. 18ರಂದು ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಗೌರವಧ್ಯಕ್ಷ ರಕ್ಷಿತ್ ಶಿವರಾಂ ಮಾಹಿತಿ ನೀಡಿದರು.


ಎಲ್ಲರಿಗೂ ಕುಳಿತು ಕೊಂಡು ನೋಡಲು ಗ್ಯಾಲರಿ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ 130ಕಂಬಳ ಕೋಣಗಳ ಮಾಲಕರು ಈಗಾಗಲೇ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಇನ್ನೂ ಹೆಚ್ಚು ಜೊತೆ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಕಂಬಳಕ್ಕೆ ಹಿರಿಯ ನಾಯಕರು, ಯು ಟಿ ಖಾದರ್, ರಮಾನಾಥ ರೈ, ಅಭಯಚಂದ್ರ ಜೈನ್, ಐವನ್ ಡಿಸೋಜಾ, ಜೆ ಆರ್ ಲೋಬೊ, ಅಶೋಕ್ ರೈ, ಹರೀಶ್ ಕುಮಾರ್ ಭಾಗವಹಿಸುವರು. ಕಂಬಳ ಉದ್ಘಾಟನೆ ಯನ್ನು ಅಳದಂಗಡಿ ಅರಮನೆ ಅರಸದರಾದ ಪದ್ಮ ಪ್ರಸಾದ್ ಅಜಿಲರು ಉದ್ಘಾಟನೆ ನೆರವೇರಿಸುವರು. ಸಭಾ ಕಾರ್ಯಕ್ರಮದ ಉದ್ಘಾಟನೆ ಯನ್ನು ಪತ್ರಕರ್ತೆ ಗ್ಯಾರಂಟಿ ಟಿ ವಿ ಚಾನೆಲ್ ನ ರಾಧಾ ಹಿರೇಗೌಡ ಚಾಲನೆ ನೀಡಲಿದ್ದಾರೆ. ಎಂ ಎಲ್ ಸಿ ರಾಜೇಂದ್ರ ಕುಮಾರ್, ರಕ್ಷಿತ್ ಶಿವರಾಂ ಅಧ್ಯಕ್ಷರು, ಕಂಬಳ ಸಮಿತಿಉಪಾಧ್ಯಕ್ಷ ಗೋಪಾಲ ಪೂಜಾರಿ, ಕೋಶಾಧಿಕಾರಿ ಅಶೋಕ್ ಪಾಣೂರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಎಲ್ ನಿತೀಶ್ ಹೆಚ್ ಕೋಟ್ಯಾನ್ ಸ್ವಾಗತಿಸಿ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಕುಕ್ಕೆಡಿ ವಂದಿಸಿದರು.









