ವೇದಮೂರ್ತಿ ಕಿರಣ್ ರಾವ್ ಗೆ ಹುಟ್ಟೂರು ನಿಡ್ಲೆಯಲ್ಲಿ ಸನ್ಮಾನ- ಉಜಿರೆ ಜನಾರ್ದನ ದೇವಸ್ಥಾನಕ್ಕೆ ಬ್ರಹ್ಮರಥ ದಾನ ಮಾಡಿದ್ದ ಕಿರಣ್ ರಾವ್ ಕುಟುಂಬ

0

ನಿಡ್ಲೆ : ಉಜಿರೆಯ ಶ್ರೀ ಜನಾರ್ಧನ ದೇವರಿಗೆ ನೂತನ “ಬ್ರಹ್ಮರಥ”ವನ್ನು ಸಮರ್ಪಸಿರುವ ಕೊಡುಗೈ ದಾನಿ, ಉಜಿರೆಯ ವೇದಮೂರ್ತಿ ಕಿರಣ್ ರಾವ್ ಹಾಗೂ ಕುಟುಂಬದವರನ್ನು ಮಾರ್ಚ್ 14ರಂದು ನಿಡ್ಲೆಯಲ್ಲಿ ಸನ್ಮಾನ ಮಾಡಲಾಯಿತು.ನಿಡ್ಲೆ ತುಳು ಶಿವಳ್ಳಿ ಸಭಾ’ದ ವತಿಯಿಂದ ಅವರ ಸಮಾಜ ಹಾಗೂ ಧಾರ್ಮಿಕ ಸೇವೆ ಗುರುತಿಸಿ, ಈ “ಹುಟ್ಟೂರ ಗೌರವರ್ಪಣೆ” ಸಲ್ಲಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮವನ್ನು ನಿಡ್ಲೆಯ ‘ಮಲ್ಲಿಗೆ ಮನೆ’ಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಿರಣ್ ರಾವ್, ಅವರ ಸೋದರ ಅಶೋಕ್ ರಾವ್, ಆಶಾ ಸಿ ರಾವ್ (ತಾಯಿ ) ಹಾಗೂ ನಿಡ್ಲೆ ತುಳು ಶಿವಳ್ಳಿ ಸಭಾದ ಅಧ್ಯಕ್ಷ ರಾದ ಟಿ. ಗಿರೀಶ್ ರಾವ್, ಕಾರ್ಯದರ್ಶಿಗಳಾದ ರಾಜಗುರು ಹೆಬ್ಬಾರ್ ಉಪಾಧ್ಯಕ್ಷರಾದ ಶಶಿ ಪ್ರಕಾಶ್ಎಂ, ಲಕ್ಷ್ಮೀ ನಾರಾಯಣ ಭಟ್, ವೆಂಕಟರತ್ನ ರಾವ್, ಸತ್ಯ ನಾರಾಯಣ ರಾವ್, ಪ್ರಕಾಶ್ ಬಿ. ಕೆ, ಕಿಶೋರ್ ಕುಮಾರ್, ಅವಿನಾಶ್ ರಾವ್, ರಾಘವೇಂದ್ರ ಉಪಾಧ್ಯಾಯ, ಪ್ರವೀಣ್ ಹೆಬ್ಬಾರ್ ಹಾಗೂ ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here