







ಬೆಳ್ತಂಗಡಿ: ಜಾಗತಿಕ ಕ್ಯಾಥೋಲಿಕ್ ಸಿರೋ ಮಲಬಾರ್ ಸಭೆಯ ಜನ ಸಾಮಾನ್ಯರ ಸಂಘಟನೆ ಯಾದ ಕ್ಯಾಥೋಲಿಕಾ ಕಾಂಗ್ರೆಸ್ ಇದರ 108 ನೇ ಜಯಂತಿ ಕೇರಳ ದ ತಲಾಶೇರಿ ಧರ್ಮಪ್ರಾಂತ್ಯದ ಕೇರಳ ದ ಕಣ್ಣೂರಿನಲ್ಲಿ ನಡೆಯಿತು.


ಬೆಳ್ತಂಗಡಿಯನ್ನು ಪ್ರತಿನಿಧಿಸಿ ಧರ್ಮ ಪ್ರಾಂತ್ಯದ ಸಂಘಟನೆಯ ಅಧ್ಯಕ್ಷ ಬೆಟ್ಟಿ ನೆಡುನಿಲಂ ಜಾಗತಿಕ ಕ್ಯಾಥೋಲಿಕ್ ಸಂಘಟನೆಯ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್ ಮತ್ತು ಸಂಯೋಜಕರಾದ ರೋಬಿನ್ ಒಡಂಬಲ್ಲಿ ಭಾಗವಹಿಸಿದರು. ಈ ಸಭೆಯಲ್ಲಿ ಸಿರೋ ಮಲಬಾರ್ ಕ್ಯಾಥೋಲಿಕ್ ಕ್ರೈಸ್ತರ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.ಇದರಲ್ಲಿ ಸಿರೋ ಮಲಬಾರ್ ಚರ್ಚ್ ನ ಕರ್ಡಿನಲ್ ಮಾರ್ ರಾಫೆಲ್ ತಟ್ಟಿಲ್ ಉದ್ಘಾಟನೆ ನೆರವೇರಿಸಿ ಮಾತಾಡಿದರು.









