ಮಾ.14-19 ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೋತ್ಸವ

0

ಕೊಯ್ಯೂರು: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೋತ್ಸವ ಮಾ.14 ರಿಂದ ಮಾ.19 ರವರಿಗೆ ಶ್ರೀ ವೇದಮೂರ್ತಿ ನಂದಕುಮಾರ ತಂತ್ರಿ ಇವರ ನೇತೃತ್ವದಲ್ಲಿ ನಡೆಯಲಿದೆ.

ಮಾ.14 ರಂದು ಬೆಳಿಗ್ಗೆ 11 ರಿಂದ ಪ್ರಾರ್ಥನೆ, ಪ್ರಶ್ನಾ ಚಿಂತನೆ, ತೋರಣ ಮುಹೂರ್ತ, ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ ರಾತ್ರಿ ಉತ್ಸವ, ಮಹಾಪೂಜೆ, ಬಲಿ ನಡೆಯಲಿದೆ.ಮಾ.15 ರಂದು ಬೆಳಿಗ್ಗೆ 7 ರಿಂದ ಉತ್ಸವ, ಕಲಶಾಭಿಷೇಕ, ಮಹಾಪೂಜೆ, ಉತ್ಸವ, ಪಡಿಯಕ್ಕಿ, ಮಹಾಪೂಜೆ, ಬಲಿ, ಸಂಜೆ 6 ಗಂಟೆಗೆ ಶ್ರೀ ಪಂಚದುರ್ಗಾ ಯಕ್ಷಗಾನ ಕಲಾಸಂಘ ಕೊಯ್ಯೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.ಮಾ.16 ರಂದು ಬೆಳಿಗ್ಗೆ 9 ರಿಂದ ದರ್ಶನ ಬಲಿ, ಕಲಶಾಭಿಷೇಕ, ಮಹಾಪೂಜೆ, ಚಂಡಿಕಾ ಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 7 ರಿಂದ ಕೊಟ್ಟಿಗೆ ಕೆಲಸ, ಮಹಾರಥೋತ್ಸವ, ಮಹಾಪೂಜೆ, ಭೂತಬಲಿ, ಕವಾಟ ಬಂಧನ ಹಾಗೂ ಕೊಯ್ಯೂರು ಶಾಲಾ ಮಕ್ಕಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ.17 ರಂದು ಬೆಳಿಗ್ಗೆ 7 ರಿಂದ ಕವಾಟ ಉದ್ಘಾಟನೆ, ಅಭಿಷೇಕ, ಪ್ರಸನ್ನ ಪೂಜೆ ಮೂಲಸ್ಥಾನ ಗುಂಡದಿಂದ ಭಂಡಾರದ ಆಗಮನ, ಮಹಾಪೂಜೆ ನಡೆಯಲಿದೆ. ನಂತರ ಶ್ರೀ ಪಂಚದುರ್ಗಾ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7 ರಿಂದ ಬೆಳ್ತಂಗಡಿ ಶೆಟ್ಟಿ ಆಟ್ಸ್ ಗಿರಿಧರ ಶೆಟ್ಟಿ ಬಳಗದವರಿಂದ ವಿನೂತನ ಶೈಲಿಯ ನೃತ್ಯ ಶ್ರೀ ಪಂಚದುರ್ಗಾಪರಮೇಶ್ವರಿ ಗೆಳೆಯರ ಬಳಗ ಕೊಯ್ಯೂರು ಇವರಿಂದ ಸತೀಶ್ ಶಿರ್ಲಾಲು ರಚಿಸಿ ನಿರ್ದೇಶಿಸಿರುವ ಅಜ್ಜೆರ್ ಅಂಜಿ-ಅಜ್ಜಿ ಇಂಚಿ ತುಳು ಹಾಸ್ಯ ಸಾಂಸಾರಿಕ ನಾಟಕ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಶ್ರೀ ಹರಿದಾಸ ಡೋಗ್ರ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ರಾತ್ರಿ 9 ರಿಂದ ಧರ್ಮದೈವಗಳ ನೇಮೋತ್ಸವ, ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೋತ್ಸವ, ಮಹಾಪೂಜೆ ನಡೆಯಲಿದೆ.

ಮಾ.18 ರಂದು ಬೆಳಿಗ್ಗೆ 9 ರಿಂದ ಕಲಶಾಭಿಷೇಕ, ಮಹಾಪೂಜೆ, ರಾತ್ರಿ 6 ರಿಂದ ಅವಭೃತ ಸ್ನಾನ, ಧ್ವಜಾರೋಹಣ, ಮಹಾಪೂಜೆ ಹಾಗೂ ರಾತ್ರಿ 9 ರಿಂದ ಕಲ್ಕುಡ ಕಲ್ಲುರ್ಟಿ ನೇಮೋತ್ಸವ ನಡೆಯಲಿದೆ.ಮಾ.19 ರಂದು ಸಂಪ್ರೋಕ್ಷಣೆ-ಮಹಾಪೂಜೆ ನಡೆಯಲಿದೆ.ಮಾ.24 ರಂದು ರಾತ್ರಿ 7 ರಿಂದ ಜಾತ್ರಾ ಪ್ರಯುಕ್ತ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ಬನತ ಬೆಮ್ಮರ್ ನಡಲಿದೆ.

LEAVE A REPLY

Please enter your comment!
Please enter your name here