ಗುಂಡ್ಯ: ಕಾರು -ಸರಕಾರಿ ಬಸ್ ಭೀಕರ ಅಪಘಾತ; ಶಿಶಿಲ ಚಂದ್ರಶೇಖರ್ ಗೌಡ ಧರ್ಮದಕಳ ಸಹಿತ ಇನ್ನಿಬ್ಬರು ನಿಧನ

0

ಶಿರಾಡಿ : ಬೆಂಗಳೂರಿನಿಂದ ಕೊಕ್ಕಡ ಕಡೆಗೆ ಬರುತ್ತಿದ್ದ ಕಾರು ಹಾಗೂ ಧರ್ಮಸ್ಥಳದಿಂದ ಮಧ್ಯಾಹ್ನ ಸುಮಾರು 1.30ಕ್ಕೆ ಬೆಂಗಳೂರು ಮೂಲಕ ತಿರುಪತಿಗೆ ಹೊರಟಿದ್ದ ರಾಜಹಂಸ ಸರಕಾರಿ ಬಸ್ ನಡುವೆ ಶಿರಾಡಿ ಘಾಟ್ ಗಡಿ ಸಮೀಪ ಭೀಕರ ಅಪಘಾತ ಸಂಭವಿಸಿದೆ.


ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ಶಿಶಿಲದ ಚಂದ್ರಶೇಖರ್ ಗೌಡ ಧರ್ಮದಕಳ, ಜನಾರ್ದನ ಗೌಡ ಕೇರಿಮಾರ್ (ಉಜಿರೆ) ಹಾಗೂ ಕಕ್ಕಿಂಜೆ ಫೈನಾನ್ಸ್‌ನ ಶ್ರೀಧರ ಗೌಡ ಮರಕಡ ಅರಳಿ ಎಂದು ಗುರುತಿಸಲಾಗಿದೆ.

ಇದೇ ವೇಳೆ ಕಾರಿನಲ್ಲಿ ಇದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಉಜಿರೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದ ಸುದ್ದಿ ತಿಳಿದು ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಜನಾರ್ದನ ಗೌಡ ಕೇರಿಮಾರ್ ಉಜಿರೆ, ಕಕ್ಕಿಂಜೆ ಫೈನಾನ್ಸ್‌ ನ ಶ್ರೀಧರ ಗೌಡ ಮರಕಡ ಅರಳಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಕಾರಿನಲ್ಲಿದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್‌ ಉಜಿರೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here