ಖ್ಯಾತ ಗಾಯಕ ಶಶಿಧರ್ ಕೋಟೆ ಅವರಿಂದ “ಜಗದೋದ್ಧಾರ ಶ್ರೀ ಜನಾರ್ದನ” ಆಲ್ಬಮ್ ಸಾಂಗ್ ಬಿಡುಗಡೆ

0

ಉಜಿರೆ : ಶ್ರೀ ಕ್ಷೇತ್ರ ಉಜಿರೆಯ ವಿಜಯಗೋಪುರ ಲೋಕಾರ್ಪಣೆ, ಬ್ರಹ್ಮರಥ ಹಾಗೂ ಪುಷ್ಪರಥ ಸಮರ್ಪಣೆ ಮತ್ತು ಅಷ್ಟಬಂಧ ಪುನಃ ಪ್ರತಿಷ್ಠಾ ಶುಭ ಸಂದರ್ಭದ ಅಂಗವಾಗಿ “ಜಗದೋದ್ಧಾರ ಶ್ರೀ ಜನಾರ್ದನ” ಎಂಬ ಭಕ್ತಿ ಆಲ್ಬಮ್ ಹಾಡಿನ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು.

ಶ್ರೀಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿ ಬೆಳಾಲು ನಿರ್ಮಾಣದ ಅಂಗವಾಗಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಹಾಗೂ ಉಜಿರೆ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣಪಡ್ವೆಟ್ನಾಯರ್ ಅವರ ಶುಭ ಆಶೀರ್ವಾದದಲ್ಲಿ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಅರ್ಪಿಸುವ ಈ ಆಲ್ಬಮ್ ಹಾಡಿನ ಪೋಸ್ಟರನ್ನು ಖ್ಯಾತ ಗಾಯಕ ಶಶಿಧರ್ ಕೋಟೆ ಅವರು ಉಜಿರೆ ಬ್ರಹ್ಮಕಳಶೋತ್ಸವದ ಭವ್ಯ ವೇದಿಕೆಯಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ವಿ. ಹರೀಶ್ ನೆರಿಯ ಅವರ ಸಾಹಿತ್ಯದಲ್ಲಿ, ಶಶಿಧರ್ ಬೆಳಾಲು ಅವರ ಗಾಯನದಲ್ಲಿ, ಹಾಗೂ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ ಅವರ ನೃತ್ಯ ಸಂಯೋಜನೆಯಲ್ಲಿ ಈ “ಜಗದೋದ್ಧಾರ ಶ್ರೀ ಜನಾರ್ದನ” ಭಕ್ತಿ ಗೀತೆಯು ಮೂಡಿಬಂದಿದೆ.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್ ಹಾಗೂ ಪದಾಧಿಕಾರಿಗಳು, ಸಾಹಿತ್ಯ ರಚಿಸಿದ ವಿ. ಹರೀಶ್ ನೆರಿಯ, ಗಾಯಕ ಶಶಿಧರ್ ಬೆಳಾಲು, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳದ ಸಂಘಟಕಿ ಬೇಬಿ ಉಮೇಶ್ ಮತ್ತು ಭಕ್ತಿ ಹೆಜ್ಜೆ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಆಲ್ಬಮ್ ಹಾಡು ಹೊಳಪು ಮೀಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಲೋಕಾರ್ಪಣೆಗೊಂಡಿದೆ.

LEAVE A REPLY

Please enter your comment!
Please enter your name here