






ಧರ್ಮಸ್ಥಳ: ನೇತ್ರಾವತಿ ಸೇತುವೆಯ ಸಮೀಪ ಬೈಕ್ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ. 2ರಂದು ರಾತ್ರಿ ನಡೆದಿದ್ದು, ಧರ್ಮಸ್ಥಳದಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ಪಿಕಪ್ ಹಾಗೂ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿ ಚಾಲಕರ ನಿಯಂತ್ರಣ ತಪ್ಪಿ ಬೈಕ್ ಸವಾರಣಿಗೆ ಗಂಭೀರ ಗಾಯವಾಗಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


ಬೈಕ್ ಸವಾರ ಕನ್ಯಾಡಿ ಕೊರಗಪ್ಪ ಪೂಜಾರಿಯವರ ದ್ವಿತೀಯ ಪುತ್ರ ನವೀನ್ ಪೂಜಾರಿ(30ವ )ಚಿಕಿತ್ಸೆ ಫಲಕಾರಿ ಆಗದೆ ಮಾ.12 ರಂದು ನಿಧನರಾಗಿದ್ದಾರೆ.









